ಕಲಬುರಗಿಯಲ್ಲಿ ಕೊಲೆ

ಕಲಬುರಗಿಯಲ್ಲಿ ಕೊಲೆ

ಕಲಬುರಗಿ, ಫೆ. 29 : ಶಹಬಾದ್ ಸಮೀಪದ ಮಾಲಗತ್ತಿ ಹೊರವಲಯದ ಮುಖ್ಯ ರಸ್ತೆ ಬದಿ ವ್ಯಕ್ತಿಯೊಬ್ಬರ ಬರ್ಬರ ಹತ್ಯೆ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯನ್ನು ಶಹಾಬಾದ್ ನಗರದ ಸತೀಶ್ ಕಂಬಾನೂರ್ ಎಂದು ಗುರುತಿಸಲಾಗಿದೆ.
ಸತೀಶ್ ಮೇಲೆ ಚಾಕು ಮತ್ತು ತಲವಾರುಗಳಿಂದ ಹಲ್ಲೆ ನಡೆಸಿ ಬೀಕರವಾಗಿ ಕೊಲ್ಲಲಾಗಿದೆ. ಹತ್ಯೆ ನಡೆಸಿದ ಸ್ಥಳದಲ್ಲಿ ಬೈಕ್ ಕೂಡ ಕಂಡು ಬಂದಿದ್ದು, ಸತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಅಡ್ಡಕಟ್ಟಿ ಬೀಳಿಸಿ ಹತ್ಯೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಆರು ತಿಂಗಳ ಹಿಂದೆ ಈತನ ಕಿರಿಯ ಸಹೋದರ ಹಾಗೂ ಶಹಾಬಾದ್ ನಗರ ಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದು ಅವರು ಸುದೀರ್ಘ ಚಿಕಿತ್ಸೆಯ ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಸತೀಶ್ ಅವರ ಹತ್ಯೆ ನಡೆದಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಲಾಗುತ್ತಿದೆ.

Related