1 ಕೋಟಿ ರೂ.ವೆಚ್ಚದಲ್ಲಿ ಸ್ಯಾನಿಟೈಜರ್ ಯಂತ್ರ

1 ಕೋಟಿ ರೂ.ವೆಚ್ಚದಲ್ಲಿ ಸ್ಯಾನಿಟೈಜರ್ ಯಂತ್ರ

ಮುದ್ದೇಬಿಹಾಳ : ಕೊರೊನಾ ವೈರಸ್ ಜನಪ್ರತಿನಿಧಿಗಳಿಗೆ,ಎಲ್ಲ ಜಾತಿ,ಜನಾಂಗದವರಿಗೆ ಒಳ್ಳೆಯ ಪಾಠ ಕಲಿಸಿದೆ. ಮುಂಜಾಗ್ರತೆಯಿಂದ ಇದ್ದರೆ ಕೊ ರೊನಾ ವೈರಸ್ ದೂರ ಇರಿಸಲು ಸಾಧ್ಯವಿದೆ ಎಂದು ವಿಧಾನಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ಶುಕ್ರವಾರ ಸಂಜೆ ವಿಧಾನಪರಿಷತ್ ಸದಸ್ಯರ ಅನುದಾನಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳಿಗೆ ಸ್ಯಾನಿಟೈಜರ್ ಸಿಂಪರಣೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಶಾಲೆ,ಸಮುದಾಯ ಭವನಗಳಿಗೆ ಸ್ಯಾನಿಟೈಜರ್ ಮಾಡಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವ ಯಂತ್ರಗಳನ್ನು ಗ್ರಾಪಂಗಳಿಗೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ 226 ಗ್ರಾಪಂ ಗಳಿಗೆ ಈ ಯಂತ್ರ ವಿತರಿಸಲಾಗುತ್ತಿದೆ.ಇದೊಂದು ಪಂಚಾಯಿತಿಯಲ್ಲಿ ಆಸ್ತಿಯಾಗುತ್ತದೆ.ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಮಾತನಾಡಿ, ಕೊರೊನಾ ವೈರಸ್ ನಿಯಂತ್ರಣದಲ್ಲಿ ಕೇಂದ್ರ ಸರಕಾರದ್ದು ಮಹತ್ವದ ಪಾತ್ರ ಇದೆ.ಒಂದೊಂದು ರಾಜ್ಯ ಒಂದೊಂದು ರೀತಿಯಲ್ಲಿ ವರ್ತನೆ ಮಾಡುತ್ತಿತ್ತು. ಕೇಂದ್ರ ಸರಕಾರ ತನ್ನ ಅಧೀನದಲ್ಲಿ ತೆಗೆದುಕೊಳ್ಳದಿದ್ದರೆ ಕೊರೊನಾ ವೈರಸ್ ವಿಶ್ವದ ಇನ್ನುಳಿದ ಎಲ್ಲ ದೇಶಗಳನ್ನು ಮೀರಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸುತ್ತಿತ್ತು. ಉದ್ಯೋಗ ಸೃಷ್ಟಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಹೇಳಿದರು.

Related