ಅಭಿವೃದ್ಧಿ ಕಾಮಗಾರಿಗೆ 1.40 ಕೋಟಿ ಅನುದಾನ

ಅಭಿವೃದ್ಧಿ ಕಾಮಗಾರಿಗೆ 1.40 ಕೋಟಿ ಅನುದಾನ

ಹಾನಗಲ್: ಪುರಸಭೆ 2019-20ನೇ ಸಾಲಿನ ಯೋಜನೆಯಡಿ 2 ಕೋಟಿ ರೂ ವಿಶೇಷ ಅನುದಾನದಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಶಿವಕುಮಾರ್ ಉದಾಸಿ ಚಾಲನೆ ನೀಡಿದರು.

ಪಟ್ಟಣದ ಕೆ. ಎಚ್.ಬಿ.ಕಾಲೋನಿ, ಗಂಗಾನಗರ, ಹೊಸಪೇಟೆ ಓಣಿ, ಮಕಬುಲಿಯಾ ನಗರ ಮತ್ತು ವಿವೇಕಾನಂದ ನಗರಗಳಲ್ಲಿ ಸಂಸದ ಶಿವಕುಮಾರ್ ಉದಾಸಿ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಉದಾಸಿ ಅವರು, 15ನೇ ಹಣಕಾಸು ಯೋಜನೆಯಡಿ 1.40 ಕೋಟಿ ಅನುದಾನ ಮಂಜೂರಾಗಿದ್ದು ಪಟ್ಟಣದ ಮೂಲಸೌಕರ್ಯ ಹಾಗೂ ಅಗತ್ಯತೆ ಬೇಡಿಕೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಒಂದು ವರ್ಷ ಅವಧಿಯಲ್ಲಿ ತಾಲೂಕಿನಾದ್ಯಂತ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ಸಾಗುತ್ತಿದೆ ಹಾಗೂ ಪುರಸಭೆಗೂ 2 ಕೋಟಿ ರು ವಿಶೇಷ ಅನುದಾನ ಲಭ್ಯವಾಗಿದೆ. ಇದರಲ್ಲಿ 7 ಪ್ಯಾಕೇಜ್‍ನಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ 1320ವೀ. ಕಾಂಕ್ರೀಟ್ ಚರಂಡಿ 1648ಮೀ. ಸಿಮೆಂಟ್ ಕಾಂಕ್ರೀಟ್ ರಸ್ತೆ 680ಮೀ.ರಸ್ತೆ ಡಾಂಬರೀಕರಣ ಹಾಗೂ 3 ಸಿ.ಡಿ.ನಿರ್ಮಾಣ ಕೈಗೊಳ್ಳಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶೋಭಾ ಉಗ್ರಣನವರ್, ಜಮೀರಅಹ್ಮದ ದರ್ಗಾ, ಸುನಕವ್ವಚಿಕ್ಕಣ್ಣನವರ, ಮಾಜಿ ಅಧ್ಯಕ್ಷ ಕಲ್ಯಾಣಕುಮಾರಶೆಟ್ಟರ, ಬಿಜೆಪಿ ತಾಲೂಕು ಅಧ್ಯಕ್ಷರಾಜುಗೌಳಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಲಿಂಗಪ್ಪ ತಲ್ಲೂರು, ಬಸವರಾಜ ಬೂದಿಹಾಳ.ಬಿ. ಎಸ್. ಅಕ್ಕಿವಳ್ಳಿ, ಸಂತೋμï ಟಿಕೂಜಿ, ಸಿದ್ದಲಿಂಗಪ್ಪ ಶಂಕರಿಕೊಪ, ರಾಜೇಶ್ ಗುಡಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎನ.ಭಜಕ್ಕನವರ್, ಇಂಜಿನಿಯರ್ ನಾಗರಾಜ್ಮಿರ್ಜಿ ಮುಂತಾದ ಮುಖಂಡರು ಇದ್ದರು.

Related