ಪ್ರತಿ ಮನೆ ಬಾಗಿಲಿಗೆ ಹಣ

ಪ್ರತಿ ಮನೆ ಬಾಗಿಲಿಗೆ ಹಣ

ಮಾಲೂರು: ಡಿಸಿಸಿ ಬ್ಯಾಂಕ್ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ಮೈಕ್ರೋ ಎಟಿಎಂ ಮೂಲಕ ಪ್ರತಿ ಮನೆ ಬಾಗಿಲಿಗೆ ಹಣ ತಲುಪಿಸುವ ಕೆಲಸವಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ದಿನ್ನೇರಿ ಹಾರೋಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ೫೮ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಮೈಕ್ರೋ ಎಟಿಎಂ ಮೂಲಕ ಸುಲಭ ಹಣ ಪಡೆಯುವ ತರಬೇತಿ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಬ್ಯಾಂಕ್‌ಗಳಲ್ಲಿ ಹಣ ಕಟ್ಟಲು, ಪಡೆಯಲು ಅಲೆದಾಡುತ್ತಿದ್ದು, ಇದನ್ನು ಅರಿತು ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮೈಕ್ರೋ ಎಟಿಎಂ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹಣವನ್ನು ತಲುಪಿಸಲಿದ್ದು, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ವೈ.ನಂಜೇಗೌಡ ಮೈಕ್ರೋ ಎಟಿಎಂ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ಸಹಕಾರ ಸಂಘಗಳ ನಿರ್ದೇಶಕ ಎಸ್.ವಿ.ಗೋವರ್ಧನ್ ರೆಡ್ಡಿ, ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ರಾಜಪ್ಪ, ನಿರ್ದೇಶಕರಾದ ಶಂಕರಪ್ಪ, ಟಿ.ಇ.ದೇವರಾಜ್, ಗೋವಿಂದಪ್ಪ, ರಾಮಕೃಷ್ಣಯ್ಯ, ವೈ.ಎನ್.ನಾರಾಯಣ, ಮಂಜುನಾಥ್, ನರಸಿಂಹಪ್ಪ, ಸಂಘದ ಕರ‍್ಯ ನಿರ್ವಹಣಾಧಿಕಾರಿ ಎಚ್.ವಿ.ತಿರುಮೇಗೌಡ, ಸುಧಾಕರ್, ಕೃಷ್ಣಪ್ಪ ಮುಖಂಡರಾದ ಚಂದ್ರೇಗೌಡ, ಎಚ್.ಟಿ.ಕೆಂಚಪ್ಪ, ಟಿ.ಪಿ.ಶ್ರೀನಿವಾಸ್, ವೆಂಕಟಸ್ವಾಮಿ, ತಿಮ್ಮೇಗೌಡ, ಎಚ್.ವೈ.ನಾರಾಯಣಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Related