ಮಿಜೋರಾಂನಲ್ಲಿ ಭೂಕಂಪ; ಕಟ್ಟಡಗಳಿಗೆ ಹಾನಿ

ಮಿಜೋರಾಂನಲ್ಲಿ ಭೂಕಂಪ; ಕಟ್ಟಡಗಳಿಗೆ ಹಾನಿ

ಐಜ್ವಾಲ್ : ಮಿಜೋರಾಂನಲ್ಲಿ ಭೂಕಂಪ ಸಂಭವಿಸಿದ್ದು, ಕೆಲವು ಕಟ್ಟಡಗಳಿಗೆ ಹಾನಿಯಾಗಿ ರಸ್ತೆಗಳು ಬಿರುಕು ಬಿಟ್ಟಿವೆ. ರಿಕ್ಟರ್ ಮಾಪಕದಲ್ಲಿ ತೀವ್ರತೆಯ ಪ್ರಮಾಣ 5.3ರಷ್ಟು ದಾಖಲಾಗಿದೆ.

ಚಾಂಫಾಯ್ ಜಿಲ್ಲೆಯಲ್ಲಿನ ಚರ್ಚ್, ಮನೆ ಸೇರಿದಂತೆ ಕೆಲವು ಕಟ್ಟಡಗಳಿಗೆ ಹಾನಿಯಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ. ಆದರೆ ಯಾವುದೇ ಸಾವು ನೋವು ಸಂಭವಿಲ್ಲ.

ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಿಜೋರಾಂ ಮುಖ್ಯಮಂತ್ರಿ ಜೋರಾಂಥಾಂಗಾವಿ ಅವರಿಗೆ ಟ್ವೀಟ್ ಮೂಲಕ ಆಶ್ವಾಸನೆ ನೀಡಿದ್ದಾರೆ.

 

Related