ಪಟ್ಟಣಕ್ಕೆ ಬಂದವರಿಗೆ ಮಾಸ್ಕ್ ವಿತರಣೆ

ಪಟ್ಟಣಕ್ಕೆ ಬಂದವರಿಗೆ ಮಾಸ್ಕ್ ವಿತರಣೆ

ಸಿಂದಗಿ : ಪಟ್ಟಣದಲ್ಲಿ ಪ್ರತಿ ಸಂತೆ ನಡೆಯುತ್ತಿದೆ. ಸಂತೆಯಲ್ಲಿ ಪಟ್ಟಣದ ಸುತ್ತಮುತ್ತ ಹಳ್ಳಿಗಳಾದ ಗೋಲಗೆರಿ, ಚಿಕ್ಕ ಸಿಂದಗಿ, ಪುರದಾಳ, ಬೋರಗಿ, ಹಳ್ಳಿಯ ಜನರು ವ್ಯಾಪಾರ ಮಾಡಲು ಬರುತ್ತಾರೆ. ಮನೆಯಿಂದ ಪಟ್ಟಣಕ್ಕೆ ಬರುವಾಗ ಮುಖ ಕವಚ ಧರಿಸಿದೆ ಅಥವಾ ಮಾಸ್ಕ್ ಧರಿಸದೆ ಬಂದವರಿಗೆ ಕರ್ನಾಟಕ ರಾಜ್ಯ ಗ್ರಹರಕ್ಷಕರದಳ ಇಲಾಖೆ ಜನ ಜಾಗೃತಿ ಅಭಿಯಾನ ಘಟಕದ ವತಿಯಿಂದ ಮಾಸ್ಕ್ ವಿತರಣೆ ಮಾಡಿದರು.

ಜನರು ಕೊರೋನಾ ಲಸಿಕೆ ವಿತರಣೆ ಮಾಡುವರೆಗೆ ಸಂತೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ವೈರಸ್ ನಿಯಂತ್ರಣ ಮಾಡಬೇಕು ಮಾಸ್ಕ್, ಸ್ಯಾನಿಟೈಸ್ ಕಡ್ಡಾಯವಾಗಿ ಬಳಕೆ ಮಾಡಿ ಕೊರೋನಾ ನಿಯಮ ಪಾಲಿಸಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಸಮಯದಲ್ಲಿ ಪಿ.ಬಿ.ತಳವಾರ, ಎಸ್.ಬಿ. ಬಾಯಿಮನಿ, ಯನ್.ಎಸ್.ಮಾದರ, ಸಂಗೀತಾ ಹಳಿಮನಿ ಸ್ಭೆರಿದಂತೆ ಅನೇಕರು ಇದ್ದರು.

Related