ಮಲ್ಲಿಕಾರ್ಜುನ ಖರ್ಗೆ ಕವರಲ್ಲಿ ಮೋದಿ ಅಬ್ಬರ

ಮಲ್ಲಿಕಾರ್ಜುನ ಖರ್ಗೆ ಕವರಲ್ಲಿ ಮೋದಿ ಅಬ್ಬರ

ಕಲಬುರಗಿ: ಇಂದು (ಜ.19 ಶುಕ್ರವಾರ) ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ಆಗಮಿಸಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿಯ ನಾಯಕರುಗಳಿಗೆ ಉತ್ಸಾಹ ತುಂಬಲು ಬಂದಿದ್ದಾರೆ.

ಹೌದು, ಇನ್ನೇನು ಕೆಲವೇ ತಿಂಗಳಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಈ ಬಾರಿ ಕರ್ನಾಟಕದಲ್ಲಿ ಕನಿಷ್ಠ ಪಕ್ಷ ಗೆಲ್ಲಲೇ ಬೇಕೆಂದು ಬಿಜೆಪಿಯ ನಾಯಕರುಗಳು ಬಣತೊಟ್ಟಿದ್ದು ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯಾದ ಕಲಬುರ್ಗಿಯಲ್ಲಿ ಇಂದು ನರೇಂದ್ರ ಮೋದಿಯವರು ಆಗಮಿಸಲಿದ್ದು, ಮೋದಿ ಸಾಗತಕ್ಕೆ ಬಿಜೆಪಿ ನಾಯಕರುಗಳು ಅದ್ದೂರಿ ತಯಾರಿ ಮಾಡಿಕೊಂಡಿದ್ದಾರೆ.

ಕೆಲವೇ ವಾರಗಳಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೆಲದಲ್ಲೇ ಖರ್ಗೆ ಕೋಟೆಯನ್ನು ಮತ್ತೊಮ್ಮೆ ಭೇದಿಸಲು ನರೇಂದ್ರ ಮೋದಿ ಮಾಸ್ಟರ್ ಪ್ಲಾನ್ ಮಾಡಲಿದ್ದು, ಈ ಹಿನ್ನೆಲೆ ಎಲ್ಲ  ಶಾಸಕರು, ಎಂಎಲ್ಸಿ, ಸಂಸದರು ಮತ್ತು ಮಾಜಿ ಶಾಸಕರೊಂದಿಗೆ ಮೋದಿ ಚರ್ಚೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಆಗಮನದಿಂದ ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರಿಗೆ ಬೂಸ್ಟರ್‌ ಡೋಸ್‌ ನೀಡಿದಂತಾಗಲಿದೆ.

 

Related