ಕ್ಷಯರೋಗ ಮುಕ್ತ ಗ್ರಾಮವಾಗಿ ರೂಪಿಸೋಣ

ಕ್ಷಯರೋಗ ಮುಕ್ತ ಗ್ರಾಮವಾಗಿ ರೂಪಿಸೋಣ

ಸಂಡೂರು: ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿಯ ಯು.ಭೂಪತಿ ಸಭಾಂಗಣದಲ್ಲಿ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಏರ್ಪಡಿಸಿದ್ದು ಗ್ರಾಮ ಪಂಚಾಯಿತಿ ಸದಸ್ಯರು, ಪಿ.ಡಿ.ಓ ಮತ್ತು ಟಿ.ಬಿ ನಿರ್ಮೂಲನೆ ಫ್ರಂಟ್ ಲೈನ್ ವರ್ಕರ್ಸ್ ಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹೇಶ್ವರಿ ಕಟ್ಟೆಪ್ಪ ರವರು 2025 ಕ್ಕೆ ಕ್ಷಯರೋಗ ಮುಕ್ತ ಗ್ರಾಮವಾಗಿ ರೂಪಿಸಲು ಇಲಾಖೆಯೊಂದಿಗೆ ಕೈಜೋಡಿಸೋಣ ಎಂದು ಕರೆ ನೀಡಿದರು. ಬಳ್ಳಾರಿ ಮತ್ತು ಮೈರಾಡ ಟಿಬಿ ರೀಚ್ ಸಂಸ್ಥೆ, ಡಣಾಪುರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತೊರಣಗಲ್ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕ್ಷಯರೋಗ ಮುಕ್ತ ಗ್ರಾಮ ಮಾಡುವಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಪಾತ್ರ ಕುರಿತು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಕಾರ್ಖಾನೆಗಳು ಇರುವ ಪ್ರದೇಶದಲ್ಲಿ ವಾಸಿಸುವ ಜನರಿಗೆ ಶ್ವಾಸಕೋಶದ ಮತ್ತು ಶ್ವಾಸಕೋಶೇತರ ಕ್ಷಯರೋಗಕ್ಕೆ ತುತ್ತಾಗುವ ಸಂಭವ ತುಂಬಾ ಇದೆ. ರೋಗ ಲಕ್ಷಗಳು ಇರುವವರನ್ನು ತಪಾಸಣೆಗೆ ಒಳಪಡಿಸಬೇಕು. ಮತ್ತೊಂದೆಡೆ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಪೌಷ್ಠಿಕಾಹಾರ ಸೇವನೆಯು ಮುಖ್ಯ, ಕ್ಷಯರೋಗ ನಿರ್ಮೂಲನೆಯಲ್ಲಿ ಮೈರಾಡ ಸಂಸ್ಥೆಯು ಕೈಜೋಡಿಸಿರುವುದು ಸಂತಸದ ವಿಷಯ ಎಂದು ತಿಳಿಸಿದರು.

Related