ಗೃಹ ರಕ್ಷಕ ದಳದಲ್ಲಿ ಮಡಿವಾಳ ಮಾಚಿದೇವ ಆಚರಣೆ

ಗೃಹ ರಕ್ಷಕ ದಳದಲ್ಲಿ ಮಡಿವಾಳ ಮಾಚಿದೇವ ಆಚರಣೆ

ಗಂಗಾವತಿ : ನಗರದ ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ ಸೋಮವಾರ ಮಡಿವಾಳ ಮಾಚಿದೇವ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು.
ಗೃಹ ರಕ್ಷಕ ದಳದ ಘಟಕ ಅಧಿಕಾರಿಯಾದ ಗೋಪಾಲ್ ಶಾಸ್ತ್ರಿ ಅವರು ಮಾತನಾಡಿ, 12ನೇ ಶತಮಾನದಲ್ಲಿ ದುರ್ಬಲರ, ಶೋಷಣೆ, ಜಾತಿಯತೆ, ಮೇಲು-ಕೀಳು, ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು.

ಇವೆಲ್ಲವುಗಳಿಂದ ಮಹಿಳೆಯರು, ವೃತ್ತಿನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು, ನಿರಾಶೆ ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು, ಸಮಬಾಳು ಒದಗಿಸುವ ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬಂದರು ಎಂದು ಗೋಪಾಲ್ ಶಾಸ್ತ್ರಿ ಹೇಳಿದರು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ತಿಮ್ಮಣ್ಣ ನಾಯಕ, ರಾಘವೇಂದ್ರ ರಾವ್, ವಿಠ್ಠಲ ನೇಕಾರ್, ಮೊಮ್ಮದ್ ಅಲಿ, ಟಿ.ಮಂಜುನಾಥ, ಇಬ್ರಾಹಿಂ, ರಮೇಶ, ಸೋಮು, ಇತರರು ಇದ್ದರು.

Related