ಸಹಕಾರ ಸಂಘಗಳಲ್ಲಿ ಕಡಿಮೆ ಬಡ್ಡಿ 

ಸಹಕಾರ ಸಂಘಗಳಲ್ಲಿ ಕಡಿಮೆ ಬಡ್ಡಿ 

ದೇವನಹಳ್ಳಿ: ಸಹಕಾರ ಸಂಘಗಳಲ್ಲಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲದ ಹಣ ನೀಡುತ್ತೇವೆ. ಖಾಸಗಿಯವರ ಬಳಿ ಸಾಲಕ್ಕೆ ಹೋಗದೇ ಎಲ್ಲಾ ರೂಪದ ಸಾಲ ನೀಡುವುದನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸೋಮವಾರ ಬಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಹನುಮಂತರಾಯಪ್ಪ ತಿಳಿಸಿದರು.
ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ 2021-22 ನೇ ಸಾಲಿನ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಖಾಸಗಿ ಕಂಪನಿಗಳು ಷರತ್ತುಗಳನ್ನು ಒಡ್ಡಿ ನಿಮಗೆ ತಿಳಿಸದೇ ಚಿನ್ನವನ್ನು ಮಾರಾಟ ಮಾಡುತ್ತಾರೆ. ಸಹಕಾರ ಸಂಘಗಳು ನಿಮಗೆ ಸೂಚನೆ ನೀಡಿ ನಂತರ ಕ್ರಮ ವಹಿಸುತ್ತದೆ. ಹಸು, ಕುರಿ, ಮೇಕೆ ಸಾಕಾಣಿಕೆಗೆ 10 ಲಕ್ಷ ಸಾಲ ನೀಡುತ್ತೇವೆ ಇದಕ್ಕೆ ಮೂರು ರೂಪಾಯಿ ಬಡ್ಡಿ ಉಳಿದಂತೆ ಸರ್ಕಾರ ಪಾವತಿ ಮಾಡುತ್ತದೆ ಎಂದು ಹೇಳಿದರು.
ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ವ್ಯವಸ್ಥಾಪಕ ನಂಜುಂಡಪ್ಪ, ಮುಖಂಡರಾದ ಜಗನ್ನಾಥ್, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, ಸದಸ್ಯರಾದ ರವೀಂದ್ರ, ಗೋಪಿ, ವಿ.ಎಸ್.ಎಸ್.ಎನ್ ಸಂಘದ ಉಪಾಧ್ಯಕ್ಷ ಮಂಜುನಾಥ್, ಪುರಸಭಾ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಸದಸ್ಯ ದೇವರಾಜ್, ಇನ್ನು ಹಲವು ಮುಖಂಡರು ಬ್ಯಾಂಕ್ ಸಿಬ್ಬಂದಿಗಳು ಹಾಜರಿದ್ದರು.

Related