ರಕ್ತದಾನದಿಂದ ಜೀವದಾನ

ರಕ್ತದಾನದಿಂದ ಜೀವದಾನ

ಮುದ್ದೇಬಿಹಾಳ : ಒಂದು ಯೂನಿಟ್ ರಕ್ತ 3 ಅಮೂಲ್ಯ ಜೀವಗಳನ್ನು ಉಳಿಸುವ ಶಕ್ತಿ ಹೊಂದಿದ್ದು, ರಕ್ತದಾನ ಎಲ್ಲ ದಾನಗಳಿಗಿಂತ ಮಹತ್ವದ್ದಾಗಿದೆ ಎಂದು  ಆರೋಗ್ಯ ಕೇಂದ್ರದ ವೈದ್ಯ ಡಾ. ರಂಗನಾಥ ವೈದ್ಯ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ರಂಗನಾಥ ವೈದ್ಯ ಮಾತನಾಡಿ, ಕೊರೋನಾ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‍ಗಳು ಸೇವೆಯನ್ನು ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ಸ್ಮರಣೆ ಮಾಡಿದ್ದಾರೆ.

ತಾಲೂಕಿನ ಯರಝರಿಯಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಕಾಳಗಿ, ಕರ್ನಾಟಕ ರಾಜ್ಯ ಯುವ ಸಂಘದ ಒಕ್ಕೂಟ ತಾಲೂಕು ಘಟಕ, ಯರಝರಿ ಗ್ರಾಮದ ಭಗತ್ ಸಿಂಗ್ ಯುವಕ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಒಂದು ಪಾಯಿಂಟ್ ರಕ್ತದಿಂದ ಕನಿಷ್ಠ ಮೂವರ ಜೀವ ಉಳಿಸಬಹುದಾಗಿದೆ. ಕೊರೋನಾ ವೈರಸ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕರು ರಕ್ತದಾನದಂತಹ ಶಿಬಿರಕ್ಕೆ ಸಾಕ್ಷಿಯಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

 

Related