ದರ್ಶನ್‍ಗೆ ಸುದೀಪ್ ಸೋದರಮಾವ ಆಗ್ತಾರಂತೆ

ದರ್ಶನ್‍ಗೆ ಸುದೀಪ್ ಸೋದರಮಾವ ಆಗ್ತಾರಂತೆ

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ    ಒಂದು ಕಾಲದಲ್ಲಿ ಸ್ನೇಹಿತರಾಗಿ ಮಿಂಚಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ದೂರಾಗಿ ವರ್ಷಗಳೇ ಕಳೆಯಿತು.

ನಟ ದರ್ಶನ್ ಟ್ವೀಟ್ ಮಾಡಿ ಮದರ್ ಇಂಡಿಯಾ ಸುಮಲತಾ ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಎಂದಿದ್ದರು. ಸುದೀಪ್ ಸಹ ಟ್ವೀಟ್ ಮಾಡಿ, ಆರೋಗ್ಯ ಮತ್ತು ಸಂತೋಷ ಸಿಗಲಿ. ಈ ದಿನ ನಿಮ್ಮ ಪಾಲಿಗೆ ಅದ್ಭುತ ದಿನವಾಗಲಿ ಎಂದು ಶುಭಕೋರಿ ಸುಮಲತಾ ಅಕ್ಕ ಎಂದು ಸಂಭೋದಿಸಿದ್ದರು.

ಇದೀಗ ಪ್ರಥಮ್ ಈ ಎರಡು ಟ್ವೀಟ್ ಅನ್ನು ಒಟ್ಟಿಗೆ ಸೇರಿಸಿ ಸಂಬಂಧವೊಂದರ ಲಾಜಿಕ್ ಹುಡುಕಿದ್ದಾರೆ. ದರ್ಶನ್ ಅವರಿಗೆ ಆದರೆ, ಸುದೀಪ್ ಅವರಿಗೆ ಅಕ್ಕ. ಹಾಗಾದ್ರೆ ಲೆಕ್ಕಾಚಾರ ಪ್ರಕಾರ ದರ್ಶನ್ ಸರ್ಗೆ ಸುದೀಪ್ ಸರ್ ಸೋದರಮಾವ ಆಗ್ತಾರೆ. ಅಂತು ನಮ್ಮ ಸಿನಿಮಾ ಇಂಡಸ್ಟ್ರಿ ಒಂದೇ ಕುಟುಂಬ ಅನ್ನೋದು ನಿಜ ಆಯ್ತು ಎಂದಿದ್ದಾರೆ. ಅಲ್ಲದೆ, ಸುಮಲತಾರಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿರುವ ಪ್ರಥಮ್, ನಮ್ಮಮ್ಮನಿಗಿಂತ ಸ್ವಲ್ಪ ದೊಡ್ಡವರು ನೀವು. ಹೀಗಾಗಿ ನಾನು ದೊಡ್ಡಮ್ಮನ್ನ ಅಂತೀನಿ ಎಂದಿದ್ದಾರೆ.

Related