ಹಲ್ಲೆಗೊಳಗಾದ ಪತ್ರಕರ್ತರ ಮೇಲೆ ಸರ್ಕಾರ ಮುಂದಾಗಲಿ

ಹಲ್ಲೆಗೊಳಗಾದ ಪತ್ರಕರ್ತರ ಮೇಲೆ ಸರ್ಕಾರ ಮುಂದಾಗಲಿ

ಸಿಂದಗಿ : ಪಟ್ಟಣದಲ್ಲಿ ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆಯ ವರದಿಗೆ ತೆರಳಿದ್ದ ಮಾಧ್ಯಮ ಮಿತ್ರರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಭಾರತೀಯ ಮಾಧ್ಯಮ ಮಂಡಳಿ ಹಾಗೂ ಅಖಿಲ ಕರ್ನಾಟಕ ಪತ್ರಕರ್ತರ ಸಂಘ ಮತ್ತು ತಾಲೂಕು ಪತ್ರಿಕಾ ಬಳಗದಿಂದ ಶುಕ್ರವಾರ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕಾನೂನು ವಾಣಿ ಸಂಪಾದಕ ದಾನಪ್ಪಗೌಡ ಚನಗೊಂಡ, ಪತ್ರಕರ್ತ ಪ್ರಕಾಶ ಬಡಿಗೇರ ಮಾತನಾಡಿ, ಸಮಾಜದಲ್ಲಿ ಪತ್ರಿಕಾ ಮಾಧ್ಯಮ ಸಾಮಾಜಿಕ ಸೇವೆಯ ಒಂದು ಭಾಗವಾಗಿದೆ. ಪತ್ರಕರ್ತನು ಸಮಾಜ ಆಗುಹೋಗುಗಳನ್ನು ದಾಖಲಿಸುವ ಮೂಲಕ ಸಮಾಜ ಸೇವಕನೇ ಆಗಿದ್ದರೂ ಕೆಲವು ಕಿಡಿಗೇಡಿಗಳು ವಿನಾಕಾರಣ ಹಲ್ಲೆ, ಕೊಲೆ ಮಾಡುವಂತಹ ಮಟ್ಟಕ್ಕೆ ಇಳಿದಿರಿವುದು ಖಂಡನೀಯ ಎಂದರು.

ಗಲಭೆಗಳು ಉಗ್ರರೂಪ ತಳೆದಾಗಲೂ ಜೀವ ಭಯ ಬದಿಗಿಟ್ಟು ನೈಜತೆಯನ್ನು ಬಿತ್ತರಿಸುವ ಮಾಧ್ಯಮದವರ ಮೇಲೆ ನಡೆಯುವ ಅಹಿತಕರ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪತ್ರಕರ್ತರ ಕಾಳಜಿಗೆ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.

ದೇಶದೆಲ್ಲೆಡೆ ಪತ್ರಕರ್ತರನ್ನು ಗೌರವದಿಂದ ಕಾಣುವ ಬದಲು ಅವರನ್ನು ಭಯಭೀತಗೊಳಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದ ಪತ್ರಕರ್ತರಿಗೆ ಭಯಮುಕ್ತ ವಾತಾವರಣ ಮತ್ತು ಸೂಕ್ತ ಕಾನೂನು ತಪ್ಪಿತಸ್ಥರ ಮೇಲೆ ಬಿಗಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Related