ದೇಶ ಕೊರೋನಾ ಸೋಂಕಿನಿಂದ ಮುಕ್ತವಾಗಲಿ : ಹೊಳಬಸು ಶೆಟ್ಟರ

ದೇಶ ಕೊರೋನಾ ಸೋಂಕಿನಿಂದ ಮುಕ್ತವಾಗಲಿ : ಹೊಳಬಸು ಶೆಟ್ಟರ

ಗುಳೇದಗುಡ್ಡ : ದೇಶ ಕೊರೋನಾದಿಂದ ತತ್ತರಿಸಿತ್ತು. ಲಾಕ್‌ಡೌನ್ ಪರಿಣಾಮದಿಂದ ಜನಜೀವನ ಸಾಕಷ್ಟು ತೊಂದರೆ ಅನುಭವಿಸಿತು. ಈಗ ಕೊರೋನಾ ಲಸಿಕೆ ಬಂದಿದೆ. ಕೊರೋನಾದಿಂದ ದೇಶ ಮುಕ್ತವಾಗಲಿ. ಜನರ ಬದುಕಿನ ಚಟುವಟಿಕೆಗಳು ಎಂದಿನಂತೆ  ಸಾಗಲಿ ಎಂದು ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಆಪ್ತ ಹೊಳಬಸು ಶೆಟ್ಟರ ಹೇಳಿದರು.

ಸ್ಥಳೀಯ ಸರ್ಕಾರಿ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆಡಳಿತ, ತಾಲೂಕು ಆರೋಗ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ಕೊರೊನಾ ವೈರಸ್ ಲಸಿಕೆ ಬರಮಾಡಿಕೊಳ್ಳುವ ಹಾಗೂ ಕೋವಿಡ್ ವ್ಯಾಕ್ಸಿನ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕೊರೋನಾದಿಂದ ಜನ ಸಾಕಷ್ಟು ಬಳಲಿದ್ದಾರೆ. ಸರ್ಕಾರ ಈಗ ಕೊರೋನಾ ವೈರಸ್‌ಗೆ ಲಸಿಕೆ ಶೋಧಿಸಿದ್ದು ಮೊದಲ ಹಂತವಾಗಿ ಕೊರೋನಾ ಕೋವಿಡ್ ಲಸಿಕೆ ದೊರೆಯಲಿದೆ. ಬಳಿಕ ಉಳಿದ ಎಲ್ಲರಿಗೂ ಇದರ ಲಾಭ ಎಲ್ಲರಿಗೂ ದೊರೆಯಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ತಾ.ಪಂ ಅಧ್ಯಕ್ಷೆ ರೇಣುಕಾ ಗಾಜಿ, ಉಪಾಧ್ಯಕ್ಷ ಯಮನೂರಪ್ಪ ವಡ್ಡರ, ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಮುಖಂಡರಾದ ಸಂಜಯ್ ಬರಗುಂಡಿ, ತಹಶೀಲ್ದಾರ್ ಗುರುರಾಜ ಎಂ.ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ, ಮುಖ್ಯಾಧಿಕಾರಿ ಜ್ಯೋತಿ ಗಿರೀಶ, ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ, ಡಾ.ಕಿರಣ ಕುಳಗೇರಿ, ಡಾ.ಬಸವರಾಜ ತಾಂಡೂರ, ಕಾರ್ಯಕ್ರಮದ ಕುರಿತು ನಿರೂಪನೆ ಜಿ.ವಿ.ಜೋಶಿ, ಬಿ.ದೂತ್, ರಾಜಶೇಖರ ಸಾವಳಗುಂದಿ, ಬಡಿಗೇರ, ಜಯಶ್ರೀ ಕಳಸಾ, ಆರೋಗ್ಯ ರಕ್ಷಣಾ ಸಮಿತಿಯ ಮಲ್ಲೇಶಪ್ಪ ಬೆಣ್ಣಿ, ಮುಬಾರಕ ಮಂಗಳೂರು, ನೀಲಕಂಠಯ್ಯ ಸಿಂದಗಿ ಮಠ ಇತರರು ಇದ್ದರು.

Related