ಕೆ ಪಿ ನಂಜುಂಡ ಕೈ ಸೇರ್ಪಡೆ

ಕೆ ಪಿ ನಂಜುಂಡ ಕೈ ಸೇರ್ಪಡೆ

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದ್ದು ಇಂದು ವಿಶ್ವಕರ್ಮ ಸಮುದಾಯದ ಅಗ್ರಗಣ್ಯ ನಾಯಕ ಕೆಪಿ ನಂಜುಂಡ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಇನ್ನು ಇವರ ಜೊತೆ ಹಲವಾರು ವಿಶ್ವಕರ್ಮ ಸಮುದಾಯದ ನಾಯಕರು ಕೂಡ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಡಿಕೆ ಶಿವಕುಮಾರ್ ಅವರ ಮಾತನಾಡಿ, ಕೆ ಪಿ ನಂಜುಂಡ ಅವರನ್ನು ಹಾಡಿ ಹೊಗಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಹಿರಿಯ ಹಿಂದುಳಿದ ವರ್ಗದ ನಾಯಕ ಕೆಪಿ ನಂಜುಂಡ ಅವರು ನಮ್ಮ ಪಕ್ಷಕ್ಕೆ ಸೇರಿದ್ದಾರೆ. ನಂಜುಂಡಿ ಸಂಘಟನಾ ಚಾತುರ್ಯವನ್ನು ಹೊಗಳಿದ ಅವರು ಕಾಯಕ ಸಮಾಜದ ಜನರನ್ನು ಸಂಘಟಿಸುವ ಕಾರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಟ್ಟರೆ ಅದನ್ನು ಸಮಪರ್ಕವಾಗಿ ಮತ್ತು ಮುತುವರ್ಜಿಯಿಂದ ಮಾಡಿದವರು ನಂಜುಂಡಿ ಅಂತ ಹೇಳಿದರೆ ಅತಿಶಯೋಕ್ತಿ ಅನಿಸದು ಎಂದು ಹೇಳಿದರು.

ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ನಿನ್ನೆಯಷ್ಟೇ ಧಾರವಾಡಲ್ಲಿರುವ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರ ಮನೆಗೆ ಹೋಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದರು. ನಂಜುಂಡಿ ಅವರು ಪಕ್ಷಕ್ಕೆ ವಾಪಸ್ಸಾದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು, ಅವರ ಸೂಚನೆಯಂತೆ ತಾನು ನಂಜುಂಡಿಯವರೊಂದಿಗೆ ಕಳೆದ ವಾರ ಮಾತುಕತೆ ನಡೆಸಿದ್ದೆ ಎಂದು ಶಿವಕುಮಾರ್ ಹೇಳಿದರು.

 

Related