ಗಗನಕ್ಕೇರಿದ ಗುಟ್ಕಾ ದರ

ಗಗನಕ್ಕೇರಿದ ಗುಟ್ಕಾ ದರ

ಯಲಬುರ್ಗಾ: ಕೊರೊನಾದಿಂದಾಗಿ ದಿನಸಿ ಹಾಗೂ ದಿನಬಳಕೆ ವಸ್ತುಗಳ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಡಕುಟುಂಬಗಳ ನಿರ್ವಹಣೆ ಕಷ್ಟಕರವಾಗಿದೆ. ಅಂತಹದ್ದರಲ್ಲಿ ಗುಟ್ಕಾ ದರ ಗಗನಕ್ಕೇರಿದ್ದು, ಯಾರು ಕಡಿವಾಣ ಹಾಕುತ್ತಿಲ್ಲ.

ಕೆಲವು ಅಂಗಡಿಕಾರರು ಗುಟ್ಕಾಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಾ ಬಂದಿದ್ದಾರೆ. ಆದರೆ ಇತ್ತಿಚೀಗೆ ಅವುಗಳ ದರ ಹತ್ತುಪಟ್ಟು ಹೆಚ್ಚಾಗಿದ್ದು, ಅದು ಮಾರಾಟಗಾರರ ಮೇಲೆ ಪರಿಣಾಮ ಬೀರಿದೆ. ಕೇವಲ ಐದು ರೂಪಾಯಿ ಬೆಲೆಯ ಒಂದು ಗುಟ್ಕಾ ಚೀಟಿಗೆ ಈಗ ಮೂವತ್ತು ರೂಪಾಯಿಯಾಗಿದ್ದು ಗುಟ್ಕಾ ಪ್ರೀಯರನ್ನು ಆತಂಕಕ್ಕೀಡು ಮಾಡಿದೆ.

ನಮ್ಮ ಕೊಪ್ಪಳ ಜಿಲ್ಲಾಧಿಕಾರಿಗಳು ಸಂಪೂರ್ಣ ತಂಬಾಕು ಹಾಗೂ ಗುಟ್ಕಾ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದು, ಈಗಲೂ ಸಾಕಷ್ಟು ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳು ದೊರೆಯುವ ಸಾದ್ಯತೆ ಹೆಚ್ಚಿದೆ. ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಪಡಿಸಿದರೆ ಈ ಗುಟ್ಕಾ ಮಾಫೀಯಾವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.

ಈ ಒಂದು ದುಶ್ಚಟಕ್ಕೆ ಬಲಿಯಾದ ಯುವ ಸಮುದಾಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಸರ್ಕಾರದ ಮೇಲಿದ್ದು ದುಡಿಮೆ ಇಲ್ಲದ ಇಂತಹ ಸಮಯದಲ್ಲಿ ಹಣದ ಕೊರತೆ ಎಲ್ಲರನ್ನು ಕಾಡುತ್ತಿದೆ. ಆದಾಗ್ಯೂ ಎಷ್ಟೋ ಯುವಕರು ಈ ಚಟಕ್ಕೆ ದಾಸರಾಗಿ ಅರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತಂಬಾಕು ನಿಷೇಧ ಕಾನೂನಿನ ಮೂಲಕ ಯುವಕರನ್ನು ಕಾಪಾಡುವ ಅವಶ್ಯಕತೆ ಇದೆ.

Related