ವೀಲಿಂಗ್‌ಗೆ ಬ್ರೇಕ್ ಹಾಕಿದ ಖಾಕಿ

  • In Cinema
  • September 7, 2021
  • 460 Views
ವೀಲಿಂಗ್‌ಗೆ ಬ್ರೇಕ್ ಹಾಕಿದ ಖಾಕಿ

ಕೆಆರ್ ಪುರ: ಕಳೆದ ಎರಡು ವಾರಗಳಲ್ಲಿ ಸುಮಾರು 6 ವೀಲಿಂಗ್ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದ ಸಂಚಾರ ಪೊಲೀಸರುK ಮಂಗಳವಾರ 3 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಡಿಸಿಪಿ ಸಂಚಾರ ಪೂರ್ವ ಶಾಂತರಾಜು ಆದೇಶದಂತೆ ಠಾಣಾಧಿಕಾರಿ ಮಹಮದ್ ಎಂ.ಎ ಠಾಣಾ ವ್ಯಾಪ್ತಿಯಲ್ಲಿ, ವೀಲಿಂಗ್ ಸ್ಟಂಟ್ ಮಾಡಿ ಕಾರ್ಯಾಚರಣೆ ಕೈಗೊಂಡಿದ್ದು, ವೀಲಿಂಗ್ ಮಾಡುವವರನ್ನು ಹಿಡಿಯುವಲ್ಲಿ ನಿರಂತರವಾಗಿದ್ದು, 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಹಳೆ ಮದ್ರಾಸ್ ರಸ್ತೆ, ಟಿಸಿ ಪಾಳ್ಯ, ಅಯ್ಯಪ್ಪನಗರ ಮುಖ್ಯರಸ್ತೆಗಳಲ್ಲಿ ಸದರಿ ವಾಹನಗಳನ್ನು, ಸವಾರರನ್ನು ವಶಕ್ಕೆ ಪಡೆಯಲಾಗಿದೆ. ವಾಹನಗಳ ಸೈಲೆನ್ಸರ್ ಗಳನ್ನು ಭಾರಿ ಶಬ್ದ ಬರುವ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಕೊಂಡಿದ್ದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಸವಾರರಾದ ಸಾಗರ್, ಫೈರೋಜ್, ಸಂಜಯ್‌ಗೌಡ ಮೊದಲಾದವರನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಪ್ರಾರಂಭಿಸಿದ್ದಾರೆ..
ಕಾರ್ಯಾಚರಣೆಯಲ್ಲಿ ಕೆಆರ್ ಪುರ ಸಂಚಾರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಹಮದ್, ಪಿಎಸ್ಐ ಸೈಯದ್ ನಿಜಾಮುದ್ದೀನ್, ಅಶ್ವಥ್, ಪ್ರವೀಣ್, ಸಿಬ್ಬಂದಿ ನಂದೀಶ್, ಪ್ರಸನ್ನ, ಸುನಿಲ್ ಮೊದಲಾದವರು ಭಾಗವಹಿಸಿದ್ದರು.

Related