ತವರಿಗೆ ಮರಳಿದ ವಲಸೆ ಕಾರ್ಮಿಕರು

ತವರಿಗೆ ಮರಳಿದ ವಲಸೆ ಕಾರ್ಮಿಕರು

ಕಾರವಾರ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿದ್ದ 3095 ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರದ ನಿರ್ದೇಶನದಂತೆ ಉತ್ತರಕನ್ನಡ ಜಿಲ್ಲೆಯಿಂದ ಅವರವರ ರಾಜ್ಯಕ್ಕೆ ಕಳುಹಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಪುರುಷೋತ್ತಮ., ರಾಜಸ್ತಾನ -257 ವಲಸೆ ಕಾರ್ಮಿಕರು, ಬಿಹಾರ-902, ಜಾರ್ಖಂಡ್-627, ಉತ್ತರಪ್ರದೇಶ-1024, ಮಧ್ಯಪ್ರದೇಶ-151 ಹಾಗೂ ಹಿಮಾಚಲಪ್ರದೇಶ-16 ಸೇರಿದಂತೆ ಒಟ್ಟು 2977 ವಲಸೆ ಕಾರ್ಮಿಕರನ್ನು ರೈಲ್ವೆ ಮೂಲಕ ಅವರ ರಾಜ್ಯಕ್ಕೆ ಕಳುಹಿಸಲಾಗಿದೆ.

ಇನ್ನೂ ಪಶ್ಚಿಮ ಬಂಗಾಳ-90, ಛತ್ತೀಸ್‍ಗಡ್-14 ಹಾಗೂ ಗುಜರಾತ್-14 ಸೇರಿದಂತೆಒಟ್ಟು 118 ವಲಸೆ ಕಾರ್ಮಿಕರನ್ನು ಬಸ್ ಮೂಲಕ ಅವರರಾಜ್ಯಕ್ಕೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Related