ಇಂದು ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್

ಇಂದು ಕಾಂತಾರ ಚಾಪ್ಟರ್ 1 ಫಸ್ಟ್‌ ಲುಕ್ ರಿಲೀಸ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಗಳು ಒಳ್ಳೊಳ್ಳೆ ಚಿತ್ರಗಳನ್ನು ಮಾಡಿ ಇಡೀ ಪ್ರಪಂಚದಾದ್ಯಂತ ಕನ್ನಡ ಚಿತ್ರರಂಗವನ್ನು ಮೇಲೆತ್ತುತ್ತಿದ್ದಾರೆ.

ಇನ್ನು ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರವು ಇಡೀ ದೇಶದಾದ್ಯಂತ ಬಹು ಸುದ್ದಿಯನ್ನು ಮಾಡಿತ್ತು. ಇದಾದ ಬಳಿಕ ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದ್ದಾರೆ.

ಯಸ್….ರಿಷಬ್‌ ಶೆಟ್ಟಿ ನಿರ್ದೇಶನ ಮತ್ತು ನಟನೆಯ, ಹೊಂಬಾಳೆ ಫಿಲಂಸ್‌ ನಿರ್ಮಾಣದ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಫಸ್ಟ್ ಲುಕ್‌ ಇಂದು ಮಧ್ಯಾಹ್ನ 12.25ಕ್ಕೆ ಬಿಡುಗಡೆಯಾಗಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿರುವ ಹೊಂಬಾಳೆ ಫಿಲಂಸ್‌, ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ. ಇದು ಬರಿ ಬೆಳಕಲ್ಲ, ದರ್ಶನ’ ಎಂದು ಬರೆದುಕೊಂಡಿದ್ದರು.

 

Related