ತರಬೇತಿಯ ರುಚಿ ನೋಡುತ್ತಿರುವ ಕಂಗನಾ!

ತರಬೇತಿಯ ರುಚಿ ನೋಡುತ್ತಿರುವ ಕಂಗನಾ!

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸದಾಗಿ ನಟಿಸುತ್ತಿರುವ ಚಿತ್ರದ ಹೆಸರು ತೇಜಸ್ ಇದರಲ್ಲಿ ಆಕೆ ಭಾರತೀಯ ವಾಯುಪಡೆಯ ಪೈಲಟ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಭರಪೂರ ಸಿದ್ಧತೆ ನಡೆಸಿದ್ದಾರಂತೆ. ಅದರ ಭಾಗವಾಗಿ ಸೇನಾ ತರಬೇತಿಯ ಕೆಲವು ಕಷ್ಟಕರ ವ್ಯಾಯಾಮಗಳನ್ನು ಮಾಡುತ್ತಿದ್ದಾರಂತೆ!

ಮುಂಬೈನ ಸ್ಟುಡಿಯೋ ಒಂದರಲ್ಲಿ ತೇಜಸ್ ಚಿತ್ರದ ಶೂಟಿಂಗ್ ಮತ್ತು ಟ್ರೈನಿಂಗ್ ಹೇಗೆ ನಡೆಯುತ್ತಿದೆ ಎಂಬುದನ್ನು ತಮ್ಮ ಅಭಿಮಾನಿಗಳೊಂದಿಗೆ ಕಂಗನಾ ಹಂಚಿಕೊಂಡಿದ್ದಾರೆ. ಸೇನಾ ತರಬೇತಿಯಲ್ಲಿ ಮತ್ತು ಸಾಹಸ ಕ್ರೀಡೆಗಳಲ್ಲಿ ಬಳಸುವ ನೆಟ್ ಕ್ಲೈಂಬಿಂಗ್‌ನ್ನು ಮಾಡುತ್ತಿರುವ ತಮ್ಮ ವೀಡಿಯೋ ತುಣಕನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.

ಬರೀ ಸೈನಿಕರ ಯೂನಿಫಾರಂ ಧರಿಸಿದರೆ ಸಾಕಾಗೋದಿಲ್ಲ ‘ಮಸಲ್ಸ್ ಆಫ್ ಐರನ್ ಮತ್ತು ನರ್ವ್ಸ್ ಆಫ್ ಸ್ಟೀಲ್ ಹೊಂದಲು ಹೇಗೆ ಸಾಧ್ಯವಾಗುತ್ತೆ ಅನ್ನುವುದನ್ನು ಅರ್ಥಮಾಡಿಕೊಳ್ಳೋಕೆ, ಅವರು(ಸೈನಿಕರು) ಎದುರಿಸುವ ಕಷ್ಟಗಳನ್ನು, ಹೋರಾಟಗಳನ್ನು ಅನುಭವಿಸುವುದು ಮುಖ್ಯ ಎಂದು ಬರೆದಿದ್ದಾರೆ ಕಂಗನಾ. ಅದಕ್ಕೇ ಯೂನಿಫಾರಂ ಧರಿಸಲು ಯೋಗ್ಯತೆಯನ್ನು ಸಂಪಾದಿಸಲು ತರಬೇತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

Related