ಆಕ್ರಮ ದಂಧೆಕೋರರ ಉದ್ಯೋಗ ಸ್ಥಾನವಾದ ಜಮಖಂಡಿ

ಆಕ್ರಮ ದಂಧೆಕೋರರ ಉದ್ಯೋಗ ಸ್ಥಾನವಾದ ಜಮಖಂಡಿ

ಜಮಖಂಡಿ : ಜಮಖಂಡಿಯೂ ಇತಿಹಾಸ ಪರಂಪರೆಯುಳ್ಳ ನಗರವಾಗಿದೆ. ಜಿಲ್ಲೆಯಾಗುವ ಆರ್ಹತೆ ಹೊಂದಿರುವ ನಗರ ಈಗ ಆಕ್ರಮ ದಂಧೆಮಾಡುವರ ನಗರವಾಗಿದೆ. ಜಮಖಂಡಿ ಅಂದಾಕ್ಷಣ ಕಾನೂನ ಬಾಹಿರ್ ದಂಧೆ ಮಾಡಲು ಹೆಸರವಾಸಿ ಆಗುತ್ತಿರುವುದು ಖೇದಕರ ಸಂಗತಿಯಾಗಿದೆ.

ತಾಲೂಕಿನಾದ್ಯಂತ ನಿತ್ಯ ಆಕ್ರಮ ದಂಧೆಗಳು ಯಾರು ಭಯವಿಲ್ಲದೆ ನಿರಂತರವಾಗಿ ನಡೆಯುವುತ್ತಿದ್ದು. ಆಕ್ರಮವಾಗಿ ಅಕ್ಕಿ ಹಾಲಿನ ಪಾವಡರ ಸಾಗಾಣಿಕೆ ಮಾಡುವರಿಗೆ ರಾಜಕೀಯ ನಂಟು ಇದೆಯಾ. ಅಧಿಕಾರಿಗಳು ಸಾಥ್ ನೀಡುತ್ತಿದ್ದಾರ..? ಹೀಗೆ ನೂರಾರು ಪ್ರಶ್ನೆಗಳು ಹುಟ್ಟುತ್ತಿದ್ದು, ದಿನದಿಂದ ದಿನಕ್ಕೆ ದಂಧೆಕೋರರ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು ಕಡಿಮೆ ಯಾಗುತ್ತಿಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ಗುರುವಾರ ಜಮಖಂಡಿ ನಗರದಲ್ಲಿ ಅನ್ನ ಭಾಗ್ಯದ ಅಕ್ಕಿಯನ್ನು ಸುಮಾರು 1345 ಕೆ.ಜಿ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಗೋದಾಮಿನ ಮೇಲೆ ದಾಳಿ ಮಾಡಿ, ನಾಲ್ವರ ವಿರುದ್ದ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಳಗಿ ಠಾಣೆಯಲ್ಲಿ ಹಿರೇಪಡಸಲಗಿಯಿಂದ ಸಾವಳಗಿ ಮಾರ್ಗವಾಗಿ ಮಹಾರಾಷ್ಟçಕ್ಕೆ ಸಾಗಿಸುತ್ತಿದ್ದ ಅಂಗನವಾಡಿ ಮಕ್ಕಳಿಗೆ ಪೂರೈಕೆಯಾಗುತ್ತಿರುವ ಕ್ಷೀರ ಭಾಗ್ಯದ ಅರ್ಧ ಕೆ.ಜಿ ಹಾಲಿನ ಪಾವಡರ ಪ್ಯಾಕೇಟ್ 96 ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು ಮೂವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಬಾಗಲಕೋಟ ಜಿಲ್ಲೆ ಜಮಖಂಡಿ ಮತ್ತು ಮುಧೋಳ ತಾಲೂಕಿನಲ್ಲೇ ಅತಿ ಹೆಚ್ಚು ಅಕ್ರಮ ದಂಧೆಗಳು ನಡೆಯತ್ತಿದ್ದು, ಜಮಖಂಡಿ, ರಬಕವಿ ಬನಹಟ್ಟಿ, ಮಹಾಲಿಂಗಪೂರದಿಂದ ದಂಧೆಕೋರರು ಅಕ್ಕಿ ಮತ್ತು ಹಾಲಿನ ಪಾವಡರ ಸಂಗ್ರಹಿಸಿ ಇವುಗಳಿಗೆ ಕೇಂದ್ರ ಸ್ಥಾನವಾಗಿರು ಮುಧೋಳಗೆ ಸಾಗಿಸಿ ಅಲ್ಲಿಂದ ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ನಿತ್ಯ ಸಾಗುತ್ತಿವೆ ಎಂದು ತಿಳಿದು ಬಂದಿದೆ.

ಜಮಖಂಡಿಯಲ್ಲಿ ಈಗಾಗಲೇ 3 ವರ್ಷ ಅವಧಿಯಲ್ಲಿ ಆಕ್ರಮ ಅಕ್ಕಿ ದಂಧೆಕೋರರ ಮೇಲೆ 18ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳು ಸಾರ್ವಜನಿಕರ ಮಾಹಿತಿ ನೀಡಿದ ಕಾರಣ ಹಗರಣ ಬೆಳಕಿಗೆ ಬಂದು ಕೇಸ್ ದಾಖಲಾಯಾಗಿವೆ ಎಂದು ಸಾರ್ವಜನಿಕರು ಹೇಳಿದರು.

ಇಂತಹ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳು ಪೊಲೀಸರು ಪ್ರಮುಖ ದಂಧೆಕೋರರ ಹೆಸರಗಳನ್ನು ಕೈಬಿಟ್ಟು ಕೆಲಸಗಾರರ ಮೇಲೆ ಪ್ರಕರಣ ದಾಖಲು ಮಾಡಿ ಕೈ ತೊಳೆದು ಕೊಳ್ಳುತ್ತಿದ್ದರು. ಆದರೆ ಈಗ ಡಿವೈಎಸ್‌ಪಿ ಎಂ. ಪಾಂಡರಂಗಯ್ಯ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸಿಕ್ಕ ದಾಸ್ತಾನು ಎಲ್ಲಿಂದ ಸಂಗ್ರಹ ಮಾಡಿದ್ದು, ಎಲ್ಲಿಗೆ ಸಾಗಿಸುತ್ತಾರೆ ಇದರ ಮೂಲ ಮಾಲೀಕರು ಯಾರು ಎಲ್ಲಾ ವಿಚಾರಣೆ ಮಾಡಿ, ಮಾಲೀಕರಗಳ ಮೇಲೆ ಪ್ರಕರಣ ದಾಖಲಿಸಲು ಎಲ್ಲ ಠಾಣಾಧಿಕಾರಿಗಳಿಗೆ ಸೂಚಿಸಿದರ ಪರಿಣಾಮ ಕೂಲಿ ಕೆಲಸಗಾರರ ಮೇಲಿನ ಪ್ರಕರಣ ಕಡಿಮೆ ಆಗಿ ದಂಧೆಕೋರರ ಮೇಲೆ ಪ್ರಕರಣ ದಾಖಲು ಆಗುತ್ತಿವೆ.

ಮರಳು, ಮಾವಾ, ಮಟಕಾ ದಂಧೆಗಳು ಹೆಚ್ಚಾಗಿದ್ದು, ಆಧಿಕಾರಿಗಳು ಜಾಣ ಕುರುಡರಂತೆ ಕಣ್ಣಿಗೆ ಕಾಣಿಸಿದರು ನಮಗೆ ಸಂಬಂಧವೇ ಇಲ್ಲ ಅನ್ನೋ ತರಾ ವರ್ತಿಸುತ್ತಿದ್ದಾರೆ.

ಇಂತಹ ಪ್ರಕರಣಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ತನಿಖೆ ಮಾಡಿಸಿ, ದಂಧೆಕೋರರಿಗೆ ಮತ್ತು ಇವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೋಳ್ಳವಂತಾಗಬೇಕು ನಿಜವಾದ ತಪ್ಪಿಸ್ಥರಿಗೆ ಶಿಕ್ಷೆಯಾಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದರು.

ಹೆಚ್ಚು ಆಕ್ರಮ ದಂಧೆಗಳು ನಡೆಯುತ್ತಿದೆ. ನಿಜವಾದ ಅಪರಾಧಿಗಳು ಹೊರ ಬರಬೇಕು. ಇವರಿಗೆ ಸಹಕಾರ ನೀಡುತ್ತಿರುವ ಭ್ರಷ್ಟ ಅಧಿಕಾರಿಗಳು ಯಾರೆಂದು ಸಮಗ್ರ ತನಿಖೆ ಮಾಡಿಸುತ್ತೇನೆ. ಈಗಾಗಲೇ ಸಂಬAಧಿಸಿ ಕೆಲ ಮಾಹಿತಿಗಳನ್ನು ಕಲೆ ಹಾಕಿದ್ದು, ಸಿಎಂ ಅವರ ಜೊತೆ ಮತ್ತು ಗೃಹ ಸಚಿವರ ಚರ್ಚಿಸಿ ಸಮಗ್ರ ತನಿಖೆ ಮಾಡಿಸುತ್ತೇನೆ.

ಶ್ರೀಕಾಂತ ಕುಲಕರ್ಣಿ, ಜಮಖಂಡಿ ಮಾಜಿ ಶಾಸಕ

ಜಿಲ್ಲೆಯಲ್ಲೆ ಯಾವುದೇ ಕಾನೂನು ಬಾಹಿರ ದಂಧೆಗಳು ನಡೆಯುವುತ್ತಿದ್ದು, ಗೊತ್ತಿದ್ದರೆ ನೇರವಾಗಿ ನನಗೆ ಕರೆ ಮಾಡಿ ಮಾಹಿತಿ ಕೊಡಿ. ನಿಮ್ಮ ಹೆಸರು ಗೌಪ್ಯವಾಗಿ ಇಟ್ಟು ದಂಧೆಕೋರರ ಮಟ್ಟಹಾಕಲು ಸಹಕರಿಸಬೇಕು. ಆಕ್ರಮ ದಂಧೆಗಳಿಗೆ ಯಾವುದೇ ಇಲಾಖೆ ಅಧಿಕಾರಿಗಳು ಸಹಕಾರ ಮಾಡಿದರೆ ಅವರ ವಿರುದ್ದು ಕ್ರಮ ಕೈಗೋಳ್ಳುತ್ತೆವೆ.

ಲೊಕೇಶ್ ಜಗಲಾಸರ, ಬಾಗಲಕೋಟೆ ಎಸ್‌ಪಿ

Related