ನಿರ್ಮಾಪಕ ಅನುರಾಗ್ ಕಶ್ಯಪ್ & ನಟಿ ತಾಪ್ಸಿ ಪನ್ನುಗೆ ಐಟಿ ಶಾಕ್!

ನಿರ್ಮಾಪಕ ಅನುರಾಗ್ ಕಶ್ಯಪ್ & ನಟಿ ತಾಪ್ಸಿ ಪನ್ನುಗೆ ಐಟಿ ಶಾಕ್!

ಮುಂಬೈ : ಈ ಇಬ್ಬರು ಸೆಲೆಬ್ರಿಟಿಗಳು ಮುಂಬೈನಲ್ಲಿ ತಮ್ಮ ನಿವಾಸ ಹಾಗೂ ಕಚೇರಿ ಹೊಂದಿದ್ದು, ಅವುಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಬುಧವಾರ ಬೆಳಗ್ಗೆಯೇ ಬಾಲಿವುಡ್​ಗೆ ಒಂದು ಶಾಕ್​ ಕೊಟ್ಟಿದೆ. ನಿರ್ಮಾಪಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಮನೆ ಹಾಗೂ ಕಚೇರಿಯ ಮೇಲೆ ಐಟಿ ದಾಳಿ ನಡೆಸಲಾಗಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಶೋಧ ನಡೆಸಿರುವುದಾಗಿ ಹೇಳಲಾಗಿದೆ. ಅನುರಾಗ್​ ಹಾಗೂ ವಿಕಾಸ್​ ಅವರೊಂದಿಗೆ ಫ್ಯಾಂಟಮ್ ಫಿಲ್ಮ್ಸ್ ಪ್ರೊಡಕ್ಷನ್​ ಹೌಸ್​ನ ಸಹ ಮಾಲೀಕತ್ವವನ್ನು ನಿರ್ಮಾಪಕ ಮಧು ಮಂಟೆನಾ ಅವರೂ ಹೊಂದಿದ್ದು, ಅವರ ಮನೆಯ ಮೇಲೂ ಐಟಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.

Related