ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಐಟಿ ಅಧಿಕಾರಿಗಳು

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಐಟಿ ಅಧಿಕಾರಿಗಳು

ಬೆಂಗಳೂರು : ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ.

ಬಿಎಸ್‌ವೈ ಆಪ್ತ ಉಮೇಶ್ ವಾಸವಿದ್ದ ರಾಜಾಜಿನಗರ ಬಾಷ್ಯಂ ಸರ್ಕಲ್ ಬಳಿ ಮೂರಂತಸ್ತಿನ ಮನೆ ಸೇರಿ ಅವರಿಗೆ ಸಂಬAಧಿಸಿದ 4 ಕಡೆ ಏಕಕಾಲಕ್ಕೆ ಐಟಿ ದಾಳಿಯಾಗಿದೆ.  ಬಿಎಸ್‌ವೈ ಸಿಎಂ ಆಗಿದ್ದಾಗ ಪಿಎ ಆಗಿದ್ದ ಉಮೇಶ್, ಅದಕ್ಕೂ ಮುನ್ನ ಯಲಹಂಕದ ಪುಟ್ಟೇನಹಳ್ಳಿ ಬಿಎಂಟಿಸಿ ಬಸ್ ಡಿಪೋದಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಕಂ ಡ್ರೈವರ್ ಆಗಿದ್ದರು.

ಡೆಫ್ಯುಟೇಷನ್ ಮೇಲೆ ಬಿಎಸ್‌ವೈ ಆಪ್ತನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಬಾಷ್ಯಂ ಸರ್ಕಲ್ ಬಳಿ 10 ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇದೇ ಮನೆ ಮೇಲೆ ಗುರುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಮೂಲದ ಉಮೇಶ್ 2008ರಿಂದಲೂ ಯಡಿಯೂರಪ್ಪ ಜತೆ ಆಪ್ತ ಒಡನಾಟ ಇಟ್ಟುಕೊಂಡಿದ್ದಾರೆ. ಕಡತ ವಿಲೇವಾರಿ, ವರ್ಗಾವಣೆಯಂತಹ ಕೆಲಸಗಳ ಜತೆಗೆ ನೀರಾವರಿ ಇಲಾಖೆಯ ವ್ಯವಹಾರವನ್ನ ಉಮೇಶ್ ಮಾಡುತ್ತಿದ್ದರು. ಯಡಿಯೂರಪ್ಪ ಮಾತ್ರವಲ್ಲ, ಸಂಸದ ರಾಘವೇಂದ್ರ, ಬಿ.ವೈ. ವಿಜಯೇಂದ್ರ ಅವರಿಗೂ ಪಿಎ ರೀತಿ ಉಮೇಶ್ ಕೆಲಸ ಮಾಡುತ್ತಿದ್ದರು. ಈಗಲೂ ಸರ್ಕಾರಿ ಕಾರು ಬಳಸುತ್ತಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ರಾಮಕೃಷ್ಣ ಹೆಗಡೆ ನಗರದ ಚಾರ್ಟೆಡ್ ಅಕೌಂಟೆಡ್ ಅಮಲಾ ಎಂಬುವರ ಮನೆ ಸೇರಿ 15ಕ್ಕೂ ಉದ್ಯಮಿಗಳು ಮತ್ತು ಚಾರ್ಟೆಡ್ ಅಕೌಂಟ್ ಮನೆಗಳ ಮೇಲೂ ಐಟಿ ದಾಳಿ ಆಗಿದೆ. ಮಹತ್ವದ ದಾಖಲೆಗಳಿಗಾಗಿ ಅಧಿಕಾರಿಗಳ ಹುಡುಕಾಟ ಮುಂದುವರಿದಿದೆ.

Related