ಐಪಿಎಲ್ : ಆರ್‌ಸಿಬಿ ಕೆಕೆಆರ್ ಇಂದು ಮುಖಾಮುಖಿ

ಐಪಿಎಲ್ : ಆರ್‌ಸಿಬಿ ಕೆಕೆಆರ್ ಇಂದು ಮುಖಾಮುಖಿ

ಬೆಂಗಳೂರು: 17ನೆಯ ಆವೃತ್ತಿಯ ಇಂಡಿಯನ್ ಪ್ರೀಮಿಯಂ ಲೀಗ್ ನಲ್ಲಿ ಇಂದು ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿದೆ.

ಇಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯು ತನ್ನ ಬಲ ಪ್ರದರ್ಶನವನ್ನು ಮಾಡಲಿದೆ.

2024ನೇ ಸಾಲಿನ 17ನೆಯ ಆವೃತ್ತಿಯಲ್ಲಿ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ಇದು ಮೂರನೇ ಪಂದ್ಯವಾಗಿದ್ದು ಈ ಪಂದ್ಯದಲ್ಲಿ ಆರ್​ಸಿಬಿ ಯಾವ ರೀತಿ ತನ್ನ  ಬಲ ಪ್ರದರ್ಶನವನ್ನು ಮಾಡುತ್ತದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನು ಆರ್​ಸಿಬಿ  ತಂಡವು ಆಡಿರುವ 2 ಪಂದ್ಯಗಳಿಂದ ಎರಡು ಅಂಕ ಗಳಿಸಿರುವ ರಾಯಲ್ ಚಾಲೆಂಜರ್ಸ್  ಬೆಂಗಳೂರು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಕೋಲ್ಕತ್ತಾ ಒಂದು ಪಂದ್ಯದಿಂದ 2 ಅಂಕಗಳನ್ನು ಹೊಂದಿ ನಾಲ್ಕನೇ ಸ್ಥಾನದಲ್ಲಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇಳಲು ಆರ್​ಸಿಬಿ ಈ ಪಂದ್ಯ ಗೆಲ್ಲಲೇ ಬೇಕಿದೆ.

 

Related