ಐಪಿಎಲ್ 2024; ಈ ಬಾರಿ ಆರೆಂಜ್ ಕ್ಯಾಪ್ ಯಾರ ಪಾಲಿಗೆ..?

ಐಪಿಎಲ್ 2024; ಈ ಬಾರಿ ಆರೆಂಜ್ ಕ್ಯಾಪ್ ಯಾರ ಪಾಲಿಗೆ..?

ಐಪಿಎಲ್ 2024ರಲ್ಲಿ ಈ ಬಾರಿ ಎಲ್ಲ ತಂಡಗಳು ಭರ್ಜರಿ ತಮ್ಮ ಪ್ರದರ್ಶನವನ್ನು ಮಾಡಿದ್ದು,  ಫೈನಲ್ ಗೆ ಈಗಾಗಲೇ ತಂಡಗಳು ಹಣಹಣಿಯನ್ನು ನಡೆಸಿಸುತ್ತಿವೆ. ಇನ್ನು ಯಾವ ಎರಡು ತಂಡಗಳು ಫೈನಲ್ ಗೆ ಹೋಗುತ್ತವೆ ಎಂಬ ಕುತೂಹಲ ಎಲ್ಲಾ ಐಪಿಎಲ್ ಅಭಿಮಾನಿಗಳಲ್ಲಿ ಮೂಡುತ್ತಿದೆ.

ಇನ್ನು ಈ ಬಾರಿ ಐಪಿಎಲ್ ನಲ್ಲಿ ಆರೆಂಜ್ ಕ್ಯಾಪ್ ಧರಿಸುವವರು ಯಾರು ಎಂಬ ಕುತೂಹಲ ಕೂಡ ಎಲ್ಲಾ ಐಪಿಎಲ್ ಅಭಿಮಾನಿಗಳಲ್ಲಿ ಮೂಡಿದೆ.

ಆದರೆ ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ವಿರಾಟ್ ಕೊಹ್ಲಿಗೆ ಆರೆಂಜ್ ಕ್ಯಾಪ್ ಸಿಗಬಹುದು ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಿನಲ್ಲಿ ಫೇಕ್ ವಾಟ್ಸಪ್

ಯೆಸ್…ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ರ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಆರೆಂಜ್ ಕ್ಯಾಪ್ ರೇಸ್​ನಲ್ಲಿದ್ದ ಬಹುತೇಕ ಆಟಗಾರರು ಈಗಾಗಲೇ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ಈ ಬಾರಿಯ ರನ್​ ಸರದಾರನ ಪಟ್ಟ ಕಿಂಗ್ ಕೊಹ್ಲಿಗೆ ಒಲಿಯಲಿದೆ.

ಹೀಗಾಗಿ 15 ಇನಿಂಗ್ಸ್​ಗಳಲ್ಲಿ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 741 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿಗೆ ಆರೆಂಜ್ ಕ್ಯಾಪ್ ಒಲಿಯುವುದು ಬಹುತೇಕ ಖಚಿತ. ಈ ಮೂಲಕ 2016ರ ಬಳಿಕ ಕಿಂಗ್ ಕೊಹ್ಲಿ ಮತ್ತೊಮ್ಮೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳಲಿದ್ದಾರೆ ಎಂದೇ ಹೇಳಬಹುದು.

Related