ಅಂತರ್ಜಾತಿ ವಿವಾಹವಾದ ದಂಪತಿಗೆ ‘ಸುರಕ್ಷಿತ ಮನೆ

ಅಂತರ್ಜಾತಿ ವಿವಾಹವಾದ ದಂಪತಿಗೆ ‘ಸುರಕ್ಷಿತ ಮನೆ

ಕೇರಳ, ಮಾ. 06: ಪ್ರೀತಿ ಪ್ರೇಮಕ್ಕೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಹೌದು, ಈ ಪ್ರೀತಿ ಪ್ರೇಮಕ್ಕೆ ಕಣ್ಣಿಲ್ಲ ಎಂಬುದು ನಿಜ, ಪ್ರೀತಿಯಲ್ಲಿ ಬಿದ್ದವರಿಗೆ ಜಾತಿ ಭೇದ ಭಾವ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ.

ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದಿರುವ ಅಂತರ್ಜಾತಿಯ ಹುಡುಗ-ಹುಡುಗಿ ಮದುವೆಯಾಗಿ ಅವರು ಬದುಕು ಸಾಗಿಸಲು ಸಂಬಂಧಿಕರು ಕುಟುಂಬದವರು ಅವರನ್ನು ಬಿಡುವುದಿಲ್ಲ ಆದ್ದರಿಂದ ಇತಂಹ ಅಂತರ್ಜಾತಿಯ ಮದುವೆಯಾದವರಿಗೆ ಕೇರಳ ಸರ್ಕಾರ ಅವರಿಗೆ ಸುರಕ್ಷಿತ ಮನೆಯ ಯೋಜನೆಯನ್ನು ನೀಡಲು ಮುಂದಾಗಿದೆ.

ಹೌದು, ಅಂತರ್ಜಾತಿ ವಿವಾಹವಾದ ದಂಪತಿಗೆ ಕೇರಳ ಸರ್ಕಾರ ಸುರಕ್ಷಿತ ವಸತಿ ಸೌಕರ್ಯವನ್ನು ನೀಡುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಸೇಫ್ ಹೋಮ್ಗಳನ್ನು ತೆರೆಯಲು ಸಾಮಾಜಿಕ ನ್ಯಾಯ ಇಲಾಖೆ ಮುಂದಾಗಿದೆ. ಸಾಮಾಜಿಕ ನ್ಯಾಯ ಸಚಿವರಾದ ಕೆ.ಕೆ. ಶೈಲಜಾ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಸುರಕ್ಷಿತ ಮನೆಗಳ ನಿರ್ಮಾಣಕ್ಕೆ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಸ್ವಯಂಸೇವಾ ಸಂಸ್ಥೆಗಳ ಬೆಂಬಲದೊಂದಿಗೆ ಈ ಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಅನ್ಯಜಾತಿಯ ಹುಡುಗ-ಹುಡುಗಿ ಮದುವೆಯಾದ ನಂತರ 1 ವರ್ಷದವರೆಗೆ ಅವರಿಗೆ ಇರಲು ಬೇಕಾದ ಮನೆ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.

ಈಗಾಗಲೇ ಕೇರಳ ಸರ್ಕಾರ, ನವವಿವಾಹಿತರು ಸಾಮಾನ್ಯ ವರ್ಗದವರಾಗಿದ್ದು, ವಾರ್ಷಿಕ 1 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿದ್ದರೆ ಅವರಿಗೆ ಸ್ವಯಂ ಉದ್ಯೋಗಕ್ಕಾಗಿ 30,000 ರೂಪಾಯಿ ಸಹಾಯಧನ ನೀಡುತ್ತಿದೆ. ಇನ್ನು ವಿವಾಹಿತರಲ್ಲಿ ಒಬ್ಬರು ಪರಿಶಿಷ್ಟ ಜಾತಿಯವರಾಗಿದ್ದರೆ ಅವರಿಗೆ 75,000 ರೂಪಾಯಿ ಸಹಾಯಧನವನ್ನು ನೀಡುತ್ತಿದೆ.

 

Related