ಮೂಲಭೂತ ಸೌಲಭ್ಯಕ್ಕೆ ಒತ್ತಾಯ

ಮೂಲಭೂತ ಸೌಲಭ್ಯಕ್ಕೆ ಒತ್ತಾಯ

ಬಂಗಾರಪೇಟೆ: ಪಟ್ಟಣದಲ್ಲಿ ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಕೂಡಲೆ ಪುರಸಭೆ ಅಥವಾ ಸರ್ಕಾರವಾಗಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಆಗ್ರಹಿಸಿ ಪುರಸಭಾ ಮುಖ್ಯಾಧಿಕಾರಿ ಶ್ರೀಧರ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸೂಲಿಕುಂಟೆ ಆನಂದ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ವಿಳಂಭವಾಗಿದ್ದು, ಈಗಿರುವ ಭವನ ಅತಿ ಚಿಕ್ಕದಾಗಿದ್ದು, ೨೦-೩೦ ಜನರು ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ ಬಹಳ ತೊಂದರೆಯಾಗುತ್ತಿದೆ, ಅದರಲ್ಲೂ ದಲಿತ ಸಂಘಟನೆಗಳಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರಾ ಕಷ್ಟಕರವಾಗಿದೆ ಹಾಗೂ ಈ ಹಿಂದೆ ಅನೇಕ ಭಾರಿ ಪುರಸಭೆ ಗಮನಕ್ಕೆ ತಂದಿದ್ದರೂ ಭವನದ ಒಳಗಿರುವ ಕುರ್ಚಿ, ಮೇಜು ಇತ್ಯಾದಿ ವಸ್ತುಗಳು ತೀರ ಹಳೆಯದಾಗಿದ್ದು. ಅದರಲ್ಲೂ ಕುಳಿತುಕೊಳ್ಳಲು ಆಗುತ್ತಿಲ್ಲ, ಈ ವಿಚಾರದ ಬಗ್ಗೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಕುರ್ಚಿ ಹಾಗೂ ಮೇಜುಗಳನ್ನು ಹೊಸದಾಗಿ ನಿಯೋಜಿಸಬೇಕೆಂದು ಮನವಿ ಮಾಡಿದರು. ಪುರಸಭಾ ಮುಖ್ಯಾಧಿಕಾರಿಗಳಾದ ಶ್ರೀಧರ್ ಮನವಿ ಸ್ವೀಕರಿಸಿ ಮಾತನಾಡಿ ಎಸ್.ಎಫ್.ಸಿ ಮುಕ್ತನಿಧಿ ಅನುದಾನ ಕ್ರಿಯಾ ಯೋಜನೆಯಲ್ಲಿ ಖರೀದಿಸಲು ತೀರ್ಮಾನಿಸಲಾಗಿದೆ. ಕೋವಿಡ್-೧೯ ಇರುವ ಕಾರಣ ವಿಳಂಬವಾಗಿದೆ ಅತಿ ಶೀಘ್ರದಲ್ಲಿಯೇ ಬೇಡಿಕೆಗಳ್ನು ಈಡೇರಿಸುವ ಭರವಸೆ ನೀಡಿದರು.
ಕರ್ನಾಟಕ ದಲಿತ ಸಮಾಜಸೇನೆಯ ಜಿಲ್ಲಾ ಮುಖಂಡ ಹುಣಸನಹಳ್ಳಿ ರಮೇಶ್, ಮುನಿಸ್ವಾಮಿ, ವಿನೋಧ್, ಪಿಳ್ಳಪ್ಪ, ದೇವಗಾನಹಳ್ಳಿ ವೆಂಕಟೇಶ್, ರಂಜಿತ್, ಸುರೇಶ್ ಭಾಗವಹಿಸಿದ್ದರು.

Related