ಮದ್ಯಪ್ರದೇಶದಲ್ಲಿ: ಮಹಿಳೆಯ ಮೇಲೆ ಪೊಲೀಸ್‌ ದೌರ್ಜನ್ಯ

ಮದ್ಯಪ್ರದೇಶದಲ್ಲಿ: ಮಹಿಳೆಯ ಮೇಲೆ ಪೊಲೀಸ್‌ ದೌರ್ಜನ್ಯ

ಮದ್ಯಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಹಿಳೆಯೊಬ್ಬರ ಜುಟ್ಟು ಹಿಡಿದು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಮದ್ತಪ್ರದೇಶದ ಕೌರಿಯ ಗ್ರಾಮದಲ್ಲಿ ಆಗಷ್ಟ್.17 ರಂದು ಮಹಿಳಾ ಪೊಲೀಸ್ ಅಧಿಕಾರಿಗಳು ಮಹಿಳೆಯೊಬ್ಬರ ಜುಟ್ಟು ಹಿಡಿದು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಇದೀಗ ಚೈನಾ ಬಾಯಿ ಕಾಚಿ ಎಂಬ ಮಹಿಳೆ ಕಟ್ನಿ ಜಿಲ್ಲೆಯ ಕೌರಿಯಾ ಎಂಬ ಊರಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ವಿದ್ಯುತ್ ಟವರ್ನ್ನು ಹಾಕಿದ್ದಕ್ಕಾಗಿ ವಿದ್ಯುತ್ ಟವರ್ ಹಾಕುವ ಗುತ್ತಿಗೆದಾರ ಇಲ್ಲಿಯವರೆಗೆ ಜಮೀನಿನ ಮಾಲಿಕರಿಗೆ ಯಾವುದೆ ಪರಿಹಾರ ನೀಡಿಲ್ಲ ಎಂದು ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ ಈ ಕಾರಣಕ್ಕಾಗಿ ಆಕೆಗೆ ಥಳಿಸಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ

ಈ ಘಟನೆ ನಡೆದಾಗ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಈ ಕೃತ್ಯವನ್ನು  ಯಾರು ತಡೆಯಲಿಲ್ಲ ಎಂದು ಹೇಳಲಾಗಿದೆ.  ಪೊಲೀಸರ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಥಳಿಸಿರುವುದನ್ನು ಅಲ್ಲಗಳೆದಿದ್ದು, ಪೊಲೀಸರು ಕಾನೂನು ಸುವ್ಯವಸ್ಥೆ ಮೀರಿಲ್ಲ ಎಂದು ಹೇಳಿದ್ದಾರೆ.

ಈಘಟಣೆ ಕುರಿತು ಮಾತನಾಡಿದ ಚೈನಾ ಬಾಯಿ ಕಾಚಿ ತಮ್ಮ ಜಮೀನಿನಲ್ಲಿ ವಿದ್ಯುತ್ ಟವರ್ ಅಳವಡಿಸಿದ್ದಕ್ಕಾಗಿ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದ್ದಾರೆ. ಇನ್ನು ತಮ್ಮ ಜಾಗಕ್ಕೆ ಬಂದ ಜೆಸಿಬಿ ಯನ್ನು ಚೈನಾ ಬಾಯಿ ಮತ್ತು ಆಕೆಯ ಸಂಬಂಧಿಕರು ತಡೆಯಲು ಪ್ರಯತ್ನಿಸಿದ್ದಾರೆ. ಈ ಸಂಧರ್ಭದಲ್ಲಿ ಪೊಲೀಸರು ಆಕೆಯನ್ನು ಥಳಿಸಿ, ಆಕೆ ಮತ್ತು ಇತರ ನಾಲ್ವರನ್ನು ಕಷ್ಟಡಿಗೆ ತೆಗೆದು ಕೊಂಡಿದ್ದಾರೆ ಎಂದು ಹೇಳಲಾಗಿದೆ.

(ವರದಿಗಾರ: ಎ.ಚಿದಾನಂದ)

Related