ದರ್ಶನ್ ವಿರುದ್ಧ ಸಿಕ್ಕಿವೆ ಪ್ರಮುಖ ಸಾಕ್ಷಿಗಳು..!

ದರ್ಶನ್ ವಿರುದ್ಧ ಸಿಕ್ಕಿವೆ ಪ್ರಮುಖ ಸಾಕ್ಷಿಗಳು..!

 

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಈಗಾಗಲೇ ಕಳೆದ 4 ದಿನಗಳಿಂದ ಜೈಲು ಸೆರೆವಾಸವನ್ನು ಅನುಭವಿಸುತ್ತಿದ್ದಾರೆ.

ಇನ್ನು ದರ್ಶನ್ ವಿಚಾರಣೆ ವೇಳೆ ನನಗೇನು ಗೊತ್ತಿಲ್ಲ. ನಾನು ಕೊಲೆ ಮಾಡಿಲ್ಲ ಎಂಬ ಮಾಹಿತಿಯನ್ನು ಹೇಳಿದ್ದ ಅವರು, ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಪ್ರಮುಖ ಸಾಕ್ಷಿಗಳು ಸಿಕ್ಕಿದೆ ಎಂಬ ಮಾಹಿತಿ ಇದೀಗ ತಿಳಿದುಬಂದಿದೆ. ಇದನ್ನೂ ಓದಿ : ರಾಜ್ಯ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ; ಬಿಜೆಪಿ ಆರೋಪ

ಕೊಲೆ ಕೇಸ್​ನಲ್ಲಿ ದರ್ಶನ್ ಏನೇ ಹೇಳಿಕೆ ನೀಡದಿದರೂ ಅವರ ವಿರುದ್ಧ  ಸಾಕ್ಷ್ಯಗಳು ಬಲವಾಗಿ ಸಿಕ್ಕಿವೆ. ಸದ್ಯ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿ ಆಗಿದ್ದಾರೆ. ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

*ಕೊಲೆಯಾದ ಸ್ಥಳದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿದಂತೆ 6 ಮಂದಿ ಮೊಬೈಲ್ ಇತ್ತು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

*ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್ ಸಿಕ್ಕಿದೆ.

*ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ದಾರೆ.

*ಮೃತದೇಹ ಬಿಸಾಡಲಿಕ್ಕೆ ಸರೆಂಡರ್​ ಆದವರಿಗೆ ತಲಾ ಐದು ಲಕ್ಷ ನೀಡಲಾಗಿದೆ. ಈಗ ಹಣ ಜಪ್ತಿ ಮಾಡಲಾಗಿದೆ.

*ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ ಆಗಿದೆ. ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಹೇಳಿಕೆ ನೀಡಲಾಗಿದೆ.

ರೇಣುಕಾ ಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಅದನ್ನ ದರ್ಶನ್​ಗೆ ತಿಳಿಸಿದ್ದಾಗಿ ಪವಿತ್ರ ಹೇಳಿಕೆ ನೀಡಿದ್ದಾರೆ.

*ರೇಣುಕಾ ಸ್ವಾಮಿಯನ್ನು ತಾವು ಕಿಡ್ನ್ಯಾಪ್ ಮಾಡಿದ್ದಾಗಿ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಒಪ್ಪಿಕೊಂಡಿದ್ದಾರೆ. ಪವನ್, ಪವಿತ್ರಾ ಹಾಗೂ ದರ್ಶನ್ ಹೇಳಿದ್ದಕ್ಕೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.

*ಆರ್.ಆರ್. ನಗರದ ಶೆಡ್​ನಲ್ಲಿ ಮೃತ ರೇಣುಕಾ ಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್ ಸಿಕ್ಕಿದೆ. ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್​ನ ಪೊಲೀಸರು ಪಡೆದಿದ್ದಾರೆ.

*ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್, ಫುಟ್ ಫ್ರಿಂಟ್​​ನ ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಹಾಗೂ ಬ್ಲಡ್ ಸ್ಯಾಂಪಲ್ ಜೊತೆ ಮ್ಯಾಚ್ ಮಾಡಿ ನೋಡೋ ಸಾಧ್ಯತೆ ಇದೆ.

*ರೇಣುಕಾ ಸ್ವಾಮಿಯ ಕೊಲೆಯಾದ ನಂತರ ದೀಪಕ್, ವಿನಯ್ ಹಾಗೂ ಪವನ್ ಪದೇ ಪದೇ ದರ್ಶನ್​ಗೆ ಕರೆ ಮಾಡಿದ್ದಾರೆ.

ಎಲ್ಲ ಸಾಕ್ಷಿ ಆಧಾರಗಳಿಂದ ರೇಣುಕಾ ಸ್ವಾಮಿಗಳ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

Related