ತಪ್ಪು ಮಾಡಿದರೆ ನಾನು ಯಾವುದೇ ಶಿಕ್ಷೆಗೂ ರೆಡಿ: ಡಿಕೆಶಿ

ತಪ್ಪು ಮಾಡಿದರೆ ನಾನು ಯಾವುದೇ ಶಿಕ್ಷೆಗೂ ರೆಡಿ: ಡಿಕೆಶಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮಧ್ಯೆ ವಾಕ್ ಸಮರ ನಡೆಯುತ್ತಿದ್ದು, ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದು ಅಗತ್ಯವಿಲ್ಲವೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

9 ವರ್ಷದ ಹೆಣ್ಣು ಮಗಳನ್ನು ತೆಗೆದುಕೊಂಡು ಹೋಗಿ ಜಮೀನನ್ನು ಬರೆಸಿಕೊಂಡರು ಎಂಬ ಆರೋಪವನ್ನು ಚಿಲ್ಲರೆ ಎಂದ ಡಿಕೆಶಿ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ, ತಪ್ಪು ಮಾಡಿದರೆ ನಾನು ಯಾವುದೇ ಶಿಕ್ಷೆಗೂ ರೆಡಿ ಇದ್ದೇನೆ ಎಂದು ದೇವೇಗೌಡರಿಗೆ ಸವಾಲು ಹಾಕಿದ್ದಾರೆ.

ನಾನು ಮೂರ್ಖನಲ್ಲ, ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅದರ ಬಗ್ಗೆ ಇನ್ನೊಂದು ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಡಿಕೆಶಿ ಟಾಂಗ್ ಕೊಟ್ಟರು. ನನ್ನ ಬಗ್ಗೆ ಅವರು ನೆನಪು ಮಾಡಿಕೊಂಡಿದ್ದಕ್ಕೆ ಬಹಳ ಸಂತೋಷ. ಅಂತಹ ದೊಡ್ಡ ವೇದಿಕೆಯಲ್ಲಿ ನನ್ನ ಹೆಸರು ಪಠಣ ಮಾಡಿದ್ದಕ್ಕೆ ಧನ್ಯವಾದ ಎಂದು ಹೇಳಿದರು.

 

Related