ಸನ್ ಟ್ಯಾನ್ ಗೆ ಮನೆ ಮದ್ದು

ಸನ್ ಟ್ಯಾನ್ ಗೆ ಮನೆ ಮದ್ದು

ಸಾಮಾನ್ಯವಾಗಿ ಬೇಸಿಗೆ ಬಂದೆ ಎಂದರೆ ಸಾಕು, ನಮಗೆ ಟ್ಯಾನ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸೂರ್ಯನ ಶಾಖದಿಂದ ಉಂಟಾಗುವ ಟ್ಯಾನ್ ಹೋಗಲಾಡಿಸಲು ನಮ್ಮ ಮನೆಯಲ್ಲಿ ಕೆಲವೊಂದು ಫೇಸ್ ಪ್ಯಾಕ್ ಗಳನ್ನು ಬಳಸಿಕೊಂಡು ಈ ಟ್ಯಾನ್ ರಿಮೋ ಮಾಡಿಕೊಳ್ಳಬಹುದು.

ಪಪ್ಪಾಯಿ ಮತ್ತು ಜೇನಿನ ಫೇಸ್ ಪ್ಯಾಕ್

ಈ ಜೋಡಿಯಲ್ಲಿರುವ ಕಿಣ್ವಗಳಿಗೆ ಚರ್ಮವನ್ನು ಬಿಳಿಚಿಸುವ ಗುಣವಿದೆ. ಈ ಗುಣದಿಂದಾಗಿಯೇ ಈ ಜೋಡಿಯನ್ನು ಅತ್ಯುತ್ತಮ ನೈಸರ್ಗಿಕ ಬಿಳಿಚುಕಾರಕ ಎಂದು ಪರಿಗಣಿಸಬಹುದು. ಇವುಗಳ ಬಳಕೆಯಿಂದ ದೊರಕುವ ಫಲಿತಾಂಶ ಉತ್ತಮವಾಗಿರುತ್ತದೆ.

ತಯಾರಿಸುವ ವಿಧಾನ

ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಒಳಗಿನ ತಿರುಳನ್ನು ಸುಮಾರು ½ ಕಪ್ ನಷ್ಟು ಪ್ರಮಾಣವನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಸಂಗ್ರಹಿಸಿ ಚನ್ನಾಗಿ ಕಿವುಚಿ. ಇದಕ್ಕೆ ಒಂದು ದೊಡ್ಡ ಚಮಚ ಜೇನನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಲೇಪವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ ಮತ್ತು ಬಿಸಿಲು ಬಿದ್ದು ಕಪ್ಪಗಾಗಿರುವ ಕೈ, ಕುತ್ತಿಗೆ ಮೊದಲಾದ ಭಾಗಗಳಿಗೆ ತೆಳುವಾಗಿ ಹಚ್ಚಿ. ಕಣ್ಣುಗಳನ್ನು ಮುಚ್ಚಿ ಕಣ್ಣಿನ ಮೇಲ್ಪದರದ ಮೇಲೂ ಹಚ್ಚಿ ಸುಮಾರು ಅರ್ಧ ಘಂಟೆ ಬಿಡಿ.

ಟೊಮಾಟೋ ಮತ್ತು ಮೊಸರಿನ ಫೇಸ್ ಪ್ಯಾಕ್

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ನೈಸರ್ಗಿಕವಾದ ’ಸತ್ತ ಜೀವಕೋಶಗಳ ಪದರ’ವನ್ನು ನಿವಾರಿಸುವ ಪ್ರಸಾದನವಾಗಿದೆ. ಅಲ್ಲದೇ ಬಿಸಿಲಿನಿಂದ ಕಪ್ಪಗಾಗಿರುವ ಭಾಗವನ್ನು ಸಹಜವರ್ಣಕ್ಕೆ ತರಲು ಮತ್ತು ಸೂಕ್ಶ್ಮ ಗೀರುಗಳನ್ನು ನಿವಾರಿಸಲು ನೆರವಾಗುತ್ತದೆ.

ತಯಾರಿಸುವ ವಿಧಾನ:

ಒಂದು ದೊಡ್ಡ ಚಮಚ ತಾಜಾ ಮತ್ತು ಸಾದಾ ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಇದಕ್ಕೆ ಟೊಮಾಟೋ ತಿರುಳಿನಿಂದ ಸಂಗ್ರಹಿಸಿದ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ದಪ್ಪನೆಯ ಲೇಪವಾಗಿಸಿ.

ಈ ಲೇಪವನ್ನು ತಣ್ಣೀರಿನಿಂದ ತೊಳೆದುಕೊಂಡ ಮುಖ ಕುತ್ತಿಗೆ ಮತ್ತು ಕೈಗಳಿಗೆ ಎಲ್ಲೆಲ್ಲಿ ಕಪ್ಪಗಾಗಿದೆಯೋ ಅಲ್ಲೆಲ್ಲಾ ದಪ್ಪನಾಗಿ ಹಚ್ಚಿಕೊಳ್ಳಿ. ಈ ಲೇಪ ಹಚ್ಚಿ ಸುಮಾರು ಅರ್ಧ ಘಂಟೆಯಾದರೂ ಹಾಗೇ ಬಿಟ್ಟು ನಂತರ ತೊಳಯಬೇಕು.

 

Related