ರಕ್ತ ಶುದ್ಧೀಕರಿಸಲು ಮನೆ ಮದ್ದು

ರಕ್ತ ಶುದ್ಧೀಕರಿಸಲು ಮನೆ ಮದ್ದು

ಇತ್ತೀಚಿನ ದಿನಮಾನಗಳಲ್ಲಿ ನಾವು ಸೇವಿಸುವಂತಹ ಆಹಾರ, ತರಕಾರಿ ಇನ್ನಿತರ ಪದಾರ್ಥಗಳಲ್ಲಿ ವಿಪರೀತವಾಗಿ ಕೆಮಿಕಲ್ ಇರುವುದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳಾಗುತ್ತಿವೆ.

ಇನ್ನು ಕೆಮಿಕಲ್ ಇರುವ ಆಹಾರ ಪದಾರ್ಥಗಳನ್ನು ನಾವು ಸೇವಿಸುವುದರಿಂದ ನಮ್ಮ ದೇಹದಲ್ಲಿ ರಕ್ತ ಕೂಡ ವಿಷಕಾರಿಯಾಗುತ್ತದ ನಮ್ಮ ರಕ್ತವನ್ನು ಸುದ್ದಿಕರಿಸಿಕೊಳ್ಳಲು ನಾವು ನಿಯಮಿತವಾಗಿ ಮನೆಯಲ್ಲಿ ಸಿಗುವ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಮ್ಮ ರಕ್ತಶುದ್ಧಿಯನ್ನು ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ ಈರುಳ್ಳಿಯಲ್ಲಿ ಕಬ್ಬಿನಾಂಶ ಹೆಚ್ಚಾಗಿರುವುದರಿಂದ ಈರುಳ್ಳಿಯನ್ನು ನಾವು ಹೆಚ್ಚಾಗಿ ಸೇವಿಸಿದರೆ ನಮ್ಮ ರಕ್ತ ಶುದ್ಧಿಯಾಗುತ್ತದೆ ಮತ್ತು ರಕ್ತ ವೃದ್ಧಿಯಾಗುತ್ತದೆ.

ಇನ್ನು ಬೇಸಿಗೆಯಲ್ಲಿ ಸಿಗುವಂತಹ ಕರ್ಬೂಜ ಹಣ್ಣಿನಲ್ಲಿ ರಕ್ತ ವೃದ್ಧಿಸುವ ಶಕ್ತಿ ಹೆಚ್ಚಗಿರುವುದರಿಂದ ಕರ್ಬೂಜವನ್ನು ನಾವು ಸೇವಿಸಬೇಕಾಗುತ್ತದೆ.

ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು, ನೆನೆಹಾಕಿ ರುಬ್ಬಿಕೊಂಡು ರಸ ತೆಗೆದು ಜೇನುತುಪ್ಪದ ಜೊತೆ ಸೇವಿಸುತ್ತಿದ್ದರೆ ರಕ್ತ ಶುದ್ಧಿ ಹಾಗೂ ರಕ್ತ ವೃದ್ಧಿಯಾಗುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿಗೆ ನಿಂಬೆಹಣ್ಣು ಹಿಂಡಿಕೊಂಡು ೧ ಚಮಚ ಜೇನುತುಪ್ಪದ ಜೊತೆ ಕುಡಿಯುತ್ತಾ ಬಂದರೆ ರಕ್ತಶುದ್ಧಿಯಾಗುತ್ತದೆ.

ದಾಳಿಂಬೆ ರಸವನ್ನು ಜೇನುತುಪ್ಪದ ಜೊತೆ ಸೇರಿಸಿ ಸೇವಿಸುತ್ತಿದ್ದರೆ ರಕ್ತ ಶುದ್ಧಿ ಹಾಗೂ ವೃದ್ಧಿಯಾಗುತ್ತದೆ.

ಬೆಟ್ಟದ ನೆಲ್ಲಿಕಾಯಿಯನ್ನು ಜಜ್ಜಿ ಬೀಜವನ್ನು ಬೇರ್ಪಡಿಸಿ ಜೇನುತುಪ್ಪ ಹಾಕಿ 21 ದಿನಗಳ ಕಾಲ ಮುಚ್ಚಿಡಿ. ನಂತರ ನೆಲ್ಲಿಕಾಯಿ ತುಣುಕುಗಳನ್ನು ತೆಗೆದುಬಿಡಿ. ಪ್ರತಿನಿತ್ಯ 1 ಚಮಚ ಜೇನುತುಪ್ಪವನ್ನು ಸೇವಿಸುತ್ತಾ ಬಂದರೆ 1 ತಿಂಗಳಲ್ಲಿ ರಕ್ತವು ಶುದ್ಧಿಯಾಗುತ್ತದೆ.

 

Related