‘ಮಿಸ್ಟರ್ 360’ಗೆ ಗುಡ್ ನ್ಯೂಸ್

‘ಮಿಸ್ಟರ್ 360’ಗೆ ಗುಡ್ ನ್ಯೂಸ್

ನವದೆಹಲಿ, ಫೆ. 18 : ಸ್ಫೋಟಕ ಎಬಿ ಡಿವಿಲಿಯರ್ಸ್ 36ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಎಬಿಡಿ ಬರ್ತ್ಡೇ ಅಂದೇ ಸೌತ್ ಆಫ್ರಿಕಾದ ಹೆಡ್ ಕೋಚ್ ಬೌಷರ್, ಎಬಿಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮಿಸ್ಟರ್ 360 ಬ್ಯಾಟಿಂಗ್ ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರನ್ನ ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಎಲ್ಲ ಮಾದರಿಯಲ್ಲೂ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ್ದ ಡಿವಿಲಿಯರ್ಸ್, 2018ರ ಐಪಿಎಲ್ ಬಳಿಕ ಅನಿರೀಕ್ಷಿತವೆಂಬಂತೆ 23 ಮೇ 2018ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆಸ್ಟ್ರೇಲಿಯಾ ವಿರುದ್ಧ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಎಬಿಡಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲು ನಿವೃತ್ತಿಯಿಂದ ಹೊರಬರಲಿದ್ದಾರೆ ಎನ್ನಲಾಗಿದೆ. ಇದನ್ನ ಸ್ವತಃ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್ ಕನ್ಫರ್ಮ್ ಮಾಡಿದ್ದಾರೆ.

Related