ನಾಮಪತ್ರ ಸಲ್ಲಿಸಿದ ಗೀತಾ ಶಿವರಾಜ್​ಕುಮಾರ್

ನಾಮಪತ್ರ ಸಲ್ಲಿಸಿದ ಗೀತಾ ಶಿವರಾಜ್​ಕುಮಾರ್

ಶಿವಮೊಗ್ಗ; ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಇಂದು (ಏಪ್ರಿಲ್ 15 ಸೋಮವಾರ) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗದಲ್ಲಿರುವ ಡಿಸಿ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಗೀತಾ ಶಿವರಾಜ್​ಕುಮಾರ್ ಅವರು ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಯಡಿರೂಪ್ಪ ಅವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಪಕ್ಷೇತರವಾಗಿ ಐಶ್ವರಪ್ಪ ನಿಂತಿದ್ದಾರೆ. ಪ್ರತಿ ಊರಿಗೆ ತೆರಳಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಗೀತಾಗೆ ಪತಿ ಶಿವರಾಜ್​ಕುಮಾರ್​, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ಸಾಥ್ ಕೊಟ್ಟಿದ್ದಾರೆ.

 

Related