ಆಹಾರ ಕಿಟ್ ವಿತರಣೆ

ಆಹಾರ ಕಿಟ್ ವಿತರಣೆ

ಸಂಡೂರು: ತಾಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಕೆ.ಹೆಚ್.ಪಿ.ಟಿ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಷಯ ನಿರ್ಮೂಲನೆ ಕುರಿತು ಮಾತನಾಡಿದ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಭರತ್ ಕುಮಾರ್, ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಾಯಿಲೆ ಬಂದಾಗ ಹೇಗೆ ಇರಬೇಕೆಂದು ವಿವರಿಸುತ್ತಾ, ಕ್ಷಯರೋಗ ಸಾಂಕ್ರಾಮಿಕ ರೋಗ, ರೋಗಿಗಳು ಕೆಮ್ಮಿದಾಗ ಶೀನಿದಾಗ ಹೊರಬರುವ ತುಂತುರು ಹನಿಗಳು ಗಾಳಿ ಮೂಲಕ ಟ್ಯುಬೆರ್ಕ್ಯುಲೈ ಎಂಬ ಬ್ಯಾಕ್ಟೀರಿಯಾದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ, ಕೆಮ್ಮಿದಾಗ ಬಟ್ಟೆ ಅಡ್ಡ ಇಟ್ಟುಕೊಳ್ಳಬೇಕು, ಎಲ್ಲಂದರಲ್ಲಿ ಉಗುಳಬಾರದು, ಮಕ್ಕಳಿಂದ ಅಂತರ ಕಾಯ್ದುಕೊಳ್ಳಬೇಕು, ಬೀಡಿ, ಸಿಗರೇಟು, ತಂಬಾಕು ಸೇವನೆ ಮತ್ತು ಮದ್ಯಪಾನ ಮಾಡುವುದನ್ನು ಸಂಪೂರ್ಣ ತ್ಯಜಿಸಬೇಕು. ಕುಟುಂಬದ ಯಾರಿಗಾದರೂ ಕ್ಷಯರೋಗದ ಲಕ್ಷಣಗಳು ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು, ಕೆಮ್ಮಿದಾಗ ಕಫ ಬರುವ ಲಕ್ಷಣಗಳು ಕಾಣಿಕೊಂಡರೆ ತಕ್ಷಣ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್, ಬೆಂಗಳೂರು ಕ್ಷಯರೋಗ ನಿರ್ಮೂಲನೆಯಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದು ಮಹತ್ವದ ಕಾರ್ಯವಾಗಿದೆ. ಈಗ ಕ್ಷಯರೋಗದ ಚಿಕಿತ್ಸೆಯಲ್ಲಿ ಇರುವವರಿಗೆ ಕೋವಿಡ್ ವಿಪತ್ತಿನಲ್ಲಿ ಪೌಷ್ಟಿಕಾಹಾರ ದೊರೆಯುವ ಸಲುವಾಗಿ ರೋಗಿಗಳಿಗೆ ಅನುಕೂಲವಾಗಲು ಟ್ರಸ್ಟ್ ವತಿಯಿಂದ ಆಹಾರ ಕಿಟ್ ಗಳನ್ನು ವಿತರಿಸಿ, ಅವುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡುವ ಅವಕಾಶ ನಮಗೆ ಮಾಡಿ ಕೊಟ್ಟಿದ್ದಾರೆ. ಇಲಾಖೆ ಅಭಾರಿಯಾಗಿರುತ್ತದೆ ಎಂದರು, ರೋಗಿಗಳು ಚಿಕಿತ್ಸೆ ಪಡೆಯುತ್ತಾ ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು.

ಈ ವೇಳೆ ಡಾ.ಭರತ್ ಕುಮಾರ್, ಡಾ.ಸಹನಾ ನಾಡಗೌಡರ್, ಗೋಪಾಲ್, ವಿಜಯಲಕ್ಷ್ಮಿ, ಸದಸ್ಯೆ ಸುನಿತಾ, ಶಿವಕುಮಾರ್ ಉಪಸ್ಥಿತರಿದ್ದರು.

Related