ಅಪಾರ್ಮೆಂಟ್‌ಯಲ್ಲಿ ಬೆಂಕಿಯ ಅವಘಡ: ಇಂಚಿಂಚೂ ಪರಿಶೀಲನೆ

ಅಪಾರ್ಮೆಂಟ್‌ಯಲ್ಲಿ ಬೆಂಕಿಯ ಅವಘಡ: ಇಂಚಿಂಚೂ ಪರಿಶೀಲನೆ

ಬೆಂಗಳೂರು: ಬೆಂಕಿ ಅವಘಡ ಅಪಾರ್ಮೆಂಟ್‌ಗೆ ವಿಧಿ-ವಿಜ್ಞಾನ ತಜ್ಞರು, ವೈದ್ಯರು, ಪೊಲೀಸರೊಟ್ಟಿಗೆ ಎಫ್‌ಎಸ್‌ಎಲ್ ತಂಡ ಬುಧವಾರ ಪರಿಶೀಲನೆ ನಡೆಸಿದರು. ನಿನ್ನೆ ನಡೆದ ಬೆಂಕಿ ಅವಘಡ ಬಹುದೊಡ್ಡ ಪಾಠವಾಯ್ತು ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಜಂಟಿ ಆಯುಕ್ತ ರಾಮಕೃಷ್ಣಯ್ಯ ಹೇಳಿದರು.
ಅಪಾರ್ಮೆಂಟ್ ಮಾಲೀಕ ಭೀಮ್ ಸೇನಾನನ್ನು ಪೊಲೀಸರು ವಿಚಾರಿಸಿದರು. ಬೆಂಕಿ ಹೇಗೆ ಹೊತ್ತಿಕೊಂಡಿದೆ, ಮನೆಯಲ್ಲಿ ಯಾವ ಯಾವ ವಸ್ತುಗಳಿದ್ದವು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದರು. ಎಫ್‌ಎಸ್‌ಎಲ್ ಮತ್ತು ಬೆಸ್ಕಾಂ ಅಧಿಕಾರಿ ಎಲೆಕ್ಟ್ರಿಕಲ್ ವಸ್ತುಗಳಿಂದ ಬೆಂಕಿ ಹತ್ತಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಹಿನ್ನೆಲೆ ಎಫ್‌ಎಸ್‌ಎಲ್ ಮತ್ತು ಬೆಸ್ಕಾಂ ಮೂರು ತಂಡಗಳಿಂದ ಪರಿಶೀಲನೆ ಕಾರ್ಯ ನಡೆಸಲಾಯಿತು. ಬೆಂಕಿ ಬಿದ್ದ ಅಪಾರ್ಟ್ಮೆಂಟ್ ಒಳಗಡೆ ಪೋಟೋ ತೆಗೆದುಕೊಳ್ಳುತ್ತಿರೋ ಎಫ್‌ಎಸ್‌ಎಲ್ ತಂಡ ಹಾಲ್, ಅಡುಗೆ ಮನೆ, ಕೊಠಡಿ, ಬಾತ್ ರೂಂ, ಟಿವಿ, ಫ್ರಿಡ್ಜ್, ವಾಷಿಂಗ್ ಮಿಷಿನ್, ಚಾರ್ಜಿಂಗ್ ಪೋರ್ಟ್ ಸಹ ಪರಿಶೀಲನೆ ನಡೆಸಿ, ಬೆಂಕಿ ಅವಘಡಕ್ಕೆ ಫ್ರಿಡ್ಜ್ ನಿಂದ ಉಂಟಾದ ಸ್ಪಾರ್ಕ್ ಕಾರಣ ಎಂದು ಸಂಪೂರ್ಣವಾಗಿ ಕಾರ್ಯಚರಣೆ ನಡೆಸಿದರು. ಮನೆಯಲ್ಲಿ ಎರಡು ಸಿಲಿಂಡರ್ ಪತ್ತೆಯಾಗಿದೆ. ಒಂದು ಸಿಲಿಂಡರ್ ನಲ್ಲಿ ಫುಲ್ ಗ್ಯಾಸ್ ಮತ್ತೊಂದರಲ್ಲಿ ನಾಲ್ಕು ಕೆಜಿ ಯಷ್ಟು ಬಾಕಿ ಉಳಿದಿರುವುದನ್ನು ಗೊತ್ತಾಯಿತು.
ಸಿಲಿಂಡರ್ ಲೀಕ್ ನಿಂದಾಗಿ ಫ್ರಿಡ್ಜ್ ಸ್ಪಾರ್ಕ್ ನಿಂದ ಹೊತ್ತಿಕೊಂಡ ಬೆಂಕಿ ಮನೆಯಲ್ಲಿರುವ ಎಲ್ಲಾ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಸಿಲಿಂಡರ್‌ನ ರೆಗ್ಯೂಲೇಟರ್ ಸಿಕ್ಕಿದ್ದಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂದು ತಿಳಿಯುತ್ತದೆ. ದೇವರ ಕೋಣೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಿದ್ದ ತಾಯಿ ಮಗಳು, ಪ್ಲೈವುಡ್‌ಗೆ ಅಂಟಿಕೊಂಡ ಬೆಂಕಿ ಪಕ್ಕದಲ್ಲೇ ಇದ್ದ ಎಲೆಕ್ಟ್ರಿಕ್‌ಗೆ ತಗಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮನೆ ಪರಿಶೀಲನೆ ನಡೆಸುತ್ತಿರುವ ಲ್ಯಾಬ್ ಸಿಬ್ಬಂದಿ ಗೋಡೆ, ಪ್ಲೈ ವುಡ್, ಎಲೆಕ್ಟ್ರಿಕ್ ವಸ್ತುಗಳ ಮಾದರಿ ಸಂಗ್ರಹಿಸಿ, ನುರಿತ ಎಲೆಕ್ಟ್ರಿಕ್ ತಜ್ಞರಿಂದ ಎಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಸಿಲಿಂಡರ್‌ನ ಮೇಲ್ಬಾಗದ ಮುಚ್ಚಳ ಓಪನ್ ಆಗಿತ್ತು. ಇದರ ಮಾದರಿಯನ್ನು ಸಿಬ್ಬಂದಿ ಪರಿಶೀಲಿಸಿದರು. ಭಾಗ್ಯ ರೇಖಾ ಮಗಳು, ಅಳಿಯ ಇದ್ದ 211ನೇ ಮನೆಯಲ್ಲಿ ಒಳಗೆ ಅಷ್ಟೊಂದು ಹಾನಿಯಾಗಿಲ್ಲ. ಸಂಪೂರ್ಣ ಭಸ್ಮವಾಗಿರುವ 210 ಪ್ಲಾಟ್‌ನ ಇಂಚಿAಚೂ ಪರಿಶೀಲನೆ ನಡೆಸಲಾಗಿದೆ. ಗ್ಯಾಸ್ ಸೋರಿಕೆ ಆಗಿರಬಹುದು ಎಂದು ಹಿನ್ನೆಲೆಯಲ್ಲಿ ಸದ್ಗುರು ಗ್ಯಾಸ್ ಏಜೆನ್ಸಿಗೆ ನೋಟಿಸ್ ಜಾರಿ ಮಾಡಲಾಯಿತು. ಸದ್ಗುರು ಏಜೆನ್ಸಿಯಿಂದ ಅಪಾರ್ಟ್ಮೆಂಟ್‌ಗೆ ಗ್ಯಾಸ್ ಸಪ್ಲೈ ಮಾಡಲಾಗ್ತಿತ್ತು, ಈ ಹಿನ್ನೆಲೆ ನೋಟಿಸ್ ನೀಡಿ ಕೂಡಲೇ ಹಾಜರಾಗುವಂತೆ ಸೂಚಿಸಲಾಯಿತು.
ಎಫ್‌ಎಸ್‌ಎಲ್ ಅಧಿಕಾರಿಗಳು ಮೂರು ಗಂಟೆಗಳ ಕಾಲ ಪರಿಶೀಲನೆ ಮಾಡಿದರು. ಮನೆಯಲ್ಲಿ ಬಟ್ಟೆ ಬರೆ ಎಲ್ಲರೂ ಸಂಪೂರ್ಣವಾಗಿ ಸುಟ್ಟುಹೋಗಿದೆ. ಮನೆಯಲ್ಲಿ ಮೊದಲು ಬ್ಲಾಸ್ಟ್ ಆಗಿರೋದು ಫ್ರಿಡ್ಜ್ ಅಂತ ಮಾಹಿತಿ ನೀಡಲಾಯಿತು. ನಂತರ ಸ್ಪಾರ್ಕ್ ಉತ್ಪತ್ತಿ ಬಳಿಕ ಬ್ಲಾಸ್ಟ್ ಆಗಿರೋ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಲಾಯಿತು. ಎಲ್ಲ ಪ್ರಾಥಮಿಕ ಮಾಹಿತಿಯನ್ನು ಪೊಲೀಸರಿಗೆ ನೀಡಿದ ಎಫ್‌ಎಸ್‌ಎಲ್ ಅಧಿಕಾರಿಗಳು ಉಳಿದಂತೆ ಅಪಾರ್ಟ್ಮೆಂಟ್ ನಲ್ಲಿ ಹಲವು ಕಡೆ ಸ್ಯಾಂಪಲ್ ಪಡೆದು ಲ್ಯಾಬ್‌ಗೆ ಹೋಗಿ ಪರಿಶೀಲನೆ ನಡೆಸಿದ ಬಳಿಕ ಸ್ಪಷ್ಟ ಮಾಹಿತಿ ನೀಡೋದಾಗಿ ಪೊಲೀಸರಿಗೆ ಮಾಹಿತಿ ನೀಡಿದರು.
ಎಫ್‌ಎಸ್‌ಎಲ್ ಅಧಿಕಾರಿ ಮೂಲಗಳು ಮಾಹಿತಿಯ ಪ್ರಕಾರ ಬಿಳೇಕಹಳ್ಳಿ ಬೆಸ್ಕಾಂ ಜೆ.ಇ ಸ್ವಾಮಿ ಮಾಹಿತಿ ನೀಡಿದ್ದಾರೆ. ಸದ್ಯ ತಾತ್ಕಾಲಿಕ ವಿದ್ಯುತ್ ನೀಡುತ್ತೇವೆ, ರಿಪೋರ್ಟ್ ಬಂದ ಬಳಿಕವೇ ವಿದ್ಯುತ್ ಸಂಪರ್ಕ ನೀಡಬಹುದು. ವಿದ್ಯುತ್ ಅವಘಡದಿಂದ ತೊಂದರೆ ಆಗಿಲ್ಲ. ಆದರೂ ಕೂಡ ಘಟನೆ ನಡೆದಿರುವ ಫ್ಲಾಟ್ ಹೊರತುಪಡಿಸಿ ಉಳಿದ 71 ಪ್ಲಾಟ್ ಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತೇವೆ.

Related