ಆನೆಮರಿಗೆ ಆರೈಕೆ

ಆನೆಮರಿಗೆ ಆರೈಕೆ

ಬನ್ನೇರುಘಟ್ಟ, ಮಾ. 5 : ಕಣ್ಣು ಬಿಡುವ ಮುನ್ನವೇ ತನ್ನ ತಾಯಿಯಿಂದ ಬೇರ್ಪಟ್ಟಿದ್ದ ಆನೆಮರಿ ಒಂಟಿಯಾಗಿ ಕಾಡಂಚಿನಲ್ಲಿ ಕಾಣಿಸಿಕೊಂಡ ಆನೆಮರಿ ಆರೈಕೆ ಮಾಡಿರುವುದು ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಸಾಕ್ಷಿ.
ಆನೆಮರಿಯನ್ನು ಸ್ಥಳೀಯರು ಕಂಡು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಸಿಬ್ಬಂದಿ ಆನೆ ಮರಿಯನ್ನು ರಕ್ಷಿಸಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಆರೈಕೆ ಮಾಡುತ್ತಿದ್ದಾರೆ. ಆನೆ ಮರಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಆಹಾರವನ್ನು ನೀಡಿದ್ದಾರೆ. ಕಳೆದ ರಾತ್ರಿ ಆನೆಗಳ ಹಿಂಡು ಬಂದ ಸಂದರ್ಭದಲ್ಲಿಆನೆ ಮರಿ ತಪ್ಪಿಸಿಕೊಂಡಿರಬಹುದು.

Related