ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು

  • In State
  • September 6, 2021
  • 376 Views
ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು

ಯಡ್ರಾಮಿ : ಬಿಳವಾರ ಗ್ರಾಮದಲ್ಲಿ ಸೋಮವಾರ ಮಲ್ಲಣ್ಣ. ಬಿ. ಕೊಂಡಿ ರವರಿಗೆ ನಿವೃತ್ತ ಸನ್ಮಾನ ಕಾರ್ಯಕ್ರಮವನ್ನು ಗ್ರಾಮಸ್ಥರು ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಣ್ಣ. ಬಿ. ಕೊಂಡಿ ಜೈ ಜವಾನ ಜೈ ಕಿಸಾನ್ ತತ್ವದ ಅಡಿಯಲ್ಲಿ ಕೆಲಸ ಮಾಡಿದ್ದೇನೆ. 1988 ರಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿ ಸೇವೆಗೆ ಸೇರಿ ರೈತರ ಏಳಿಗೆಗೆ ಶ್ರಮಿಸಿದ್ದೇನೆ. ಯಾಕೆಂದರೆ ನಾನು ಕೂಡ ಒಂದು ರೈತ ಕುಟುಂಬದಿಂದ ಬಂದಿದ್ದು,  ಕಷ್ಟ ಏನು ಅಂತ ತಿಳಿದುಕೊಂಡಿದ್ದೇನೆ. ಅದಕ್ಕಾಗಿ ರೈತರ ಕೆಲಸ ವಿಳಂಬವಾಗದ ರೀತಿಯಲ್ಲಿ ನೋಡಿಕೊಂಡಿದ್ದೇನೆ. 40 ವರ್ಷ ಸೇವಾ ಅವಧಿ ತುಂಬಾ ಸಂತಸ ತಂದಿದೆ. ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು. ಅಂತವರ ಸೇವೆ ಮಾಡುವುದು ಅದೃಷ್ಟದ ಸಂಗತಿ. ನಾನು ನಿವೃತ್ತಿ ಹೊಂದಿದರು ಕೃಷಿ ಚಟುವಟಿಕೆ ಮರಿಯಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

‘ಮಲ್ಲಣ್ಣ ಸರ್ ಅವರಿಗೆ ನಾವು ಬಹಳ ಹತ್ತಿರದಿಂದ ನೋಡಿದವರು. ಅವರ ಸೇವೆಯಲ್ಲಿ ಯಾವುದೇ ಕಪ್ಪು ಚುಕ್ಕಿ ಹೊಂದಿಲ್ಲ. ನಾವು ಕೃಷಿಗೆ ಸಂಬಂಧಿಸಿದ ಕೆಲಸಕ್ಕೆ ಅವರ ಬಳಿ ಹೋದಾಗ ವಿಳಂಬವಿಲ್ಲದೆ ಮಾಡಿ ಕೊಟ್ಟಿದ್ದಾರೆ’ ಎಂದು ಮಾಜಿ ಜಿ.ಪಂ.ಸದಸ್ಯ ಬಸವರಾಜಗೌಡ ಪಾಟೀಲ ನರಬೋಳ ಮೆಚ್ಚಿಗೆ ವ್ಯಕ್ತಪಡಿಸಿದರು.
ಬಸವರಾಜ ಸಾಹುಕಾರ, ಮುಕ್ಕಣ್ಣಿ, ಆಂದೋಲ ಸ್ವಾಮೀಜಿ, ಶ್ರೀಶೈಲಗೌಡ ಕರಕಿಹಳ್ಳಿ,ಶಂಕರಲಿಂಗ ಕರಕಿಹಳ್ಳಿ, ದೇವು ಅಣಜಿಗಿ, ಮಲ್ಲಣ್ಣಗೌಡ ನೆರಡಗಿ, ಈರಣ್ಣ ಸಾಹುಕಾರ, ಮುಕ್ಕಣ್ಣಿ, ಇನ್ನಿತರರು ಮಲ್ಲಣ್ಣ ಕೊಂಡಿ ಸ್ನೇಹಿತರು ಮತ್ತು ಬಂದು ಬಳಗದವರು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

Related