ʼಸಲಾರ್ʼ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ

ʼಸಲಾರ್ʼ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ

ಬಹುನಿರೀಕ್ಷಿತ ಬಾಹುಬಲಿ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಟ್ರೈಲರ್ ನೆನೆ ಶುಕ್ರವಾರ ಸಾಯಂಕಾಲ ರಿಲೀಸ್ ಆಗಿದ್ದು ಪ್ರಭಾಸ್ ಅಭಿಮಾನಿಗಳ ಹೃದಯದಲ್ಲಿ ಮತ್ತೆ ಕನಸಿನ ಮಳೆ ಚೆಲ್ಲಿದೆ.

ಹೌದು ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಚಿತ್ರ ಸಲಾರ್ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ. ಖಡಕ್ ಲುಕಿನಲ್ಲಿ ಎಂಟ್ರಿ ಕೊಡುವ ಪ್ರಭಾಸ್ ನಟನೆಯ ಬಹು ಅದ್ದೂರಿಯಾಗಿದ್ದು ಅಭಿಮಾನಿಗಳು ಚಿತ್ರ ತೆರೆಗೆ ಕಾತುರದಿಂದ ಕಾಯುತ್ತಿದ್ದಾರೆ.

3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್‌ನ ಹೈಲೈಟ್ ಆಗಿದೆ. ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್‌ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್‌’ ರಿಲೀಸ್‌ ಆಗುತ್ತಿದೆ.

 

Related