ನಕಲಿ ವೈದ್ಯರ ಧನ ದಾಹ: ಅಮಾಯಕರು ಬಲಿ

ನಕಲಿ ವೈದ್ಯರ ಧನ ದಾಹ: ಅಮಾಯಕರು ಬಲಿ

ಗುಬ್ಬಿ : ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದ್ದು ತಮ್ಮ ಸ್ವ ಇಚ್ಚೆಯಂತೆ ಕ್ಲಿನಿಕ್ ನಡೆಸುತ್ತಿದ್ದಾರೆ. ಕೆಲವು ವೈದ್ಯರು ಪರವಾನಿಗೆ ತೆಗೆದುಕೊಳ್ಳದೇ ಇರುವುದು, ಕೆಲವು ವೈದ್ಯರು ಪರವಾನಿಗೆ ತೆಗೆದುಕೊಂಡಿದ್ದರು ನವೀಕರಣ ಮಾಡಿಸಿಕೊಳ್ಳದೆ ಹಳೆಯ ಪರವಾನಿಗೆಯಲ್ಲಿ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯ ಪ್ರಜ್ಞಾವಂತ ಸಾರ್ವಜನಿಕರ ಆರೋಪ ಕೇಳಿಬರುತ್ತಿದೆ.

ತಾಲೂಕಿನಲ್ಲಿ ಸುಮಾರು 40 ರಿಂದ 50 ಕ್ಲಿನಿಕ್‌ಗಳಿದ್ದು 30 ಕ್ಲಿನಿಕ್‌ಗಳು ಮಾತ್ರ ಪರವಾನಿಗೆ ಪಡೆದುಕೊಂಡಿವೆ ಕೆಲವು ಕ್ಲಿನಿಕ್ ಗಳು ಪರವಾನಿಗೆಯನ್ನು ನವೀಕರಿಸುವಲ್ಲಿ ನಿರ್ಲಕ್ಷö್ಯ ತೋರುತ್ತಿದ್ದು ಇನ್ನುಳಿದ ಕ್ಲಿನಿಕ್‌ಗಳು ಪರವಾನಿಗೆಯನ್ನು ತೆಗೆದುಕೊಳ್ಳುವಲ್ಲಿ ಬೇಜವಾಬ್ದಾರಿತನ ತೋರುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.

ವೈದ್ಯಕೀಯ ಅಧಿಕಾರಿಗಳ ಶಾಮೀಲು

ಕೆಲವು ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ ಒಂದೇ ಕಟ್ಟಡದಲ್ಲಿ ಒಂದೇ ಬಾಗಿಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇಂತಹ ವೈದ್ಯರು ಮತ್ತು ಮೆಡಿಕಲ್ ಶಾಪ್‌ಗಳ ವಿರುದ್ಧ ಉನ್ನತ ಮಟ್ಟದ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳದೆ ಜಾಣ ಮೌನ ತೋರುತ್ತಿರುವುದ ರಿಂದ ನಕಲಿ ವೈದ್ಯರ ಮತ್ತು ಮೆಡಿಕಲ್ ಶಾಪ್‌ಗಳ ಹಾವಳಿಯಿಂದ ತಾಲೂಕಿನಲ್ಲಿ ಇರುವ (ಎಂಬಿಬಿಎಸ್) ವೈದ್ಯರುಗಳ ಹೆಸರಿಗೆ ಮಸಿ ಬಳಿದಂತೆ ಆಗುತ್ತಿದೆ.

ಅಮಾಯಕರು ಬಲಿ

ಗ್ರಾಮೀಣ ಭಾಗದ ಹಳ್ಳಿಯ ಮುಗ್ದ ಜನತೆ ನಕಲಿ ವೈದ್ಯರು ನೀಡುವಂತಹ ಹೆಚ್ಚಿನ ಔಷಧಿಗೆ ಬಲಿಯಾಗುತ್ತಿದ್ದಾರೆ ಎಂದು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕೇಳಿಬರುತ್ತಿದೆ.

ಮನಸ್ಸಿಗೆ ಬಂದ ಔಷಧಿ

ಕೆಲವು ಕ್ಲಿನಿಕ್ ನಲ್ಲಿ ವೈದ್ಯರುಗಳು ಮನಸ್ಸಿಗೆ ಬಂದಂತೆ ಔಷಧಿಗಳನ್ನು ಕೊಟ್ಟು ಕಳುಹಿಸುವುದು ಮತ್ತು ಔಷಧಿಗಳ ಕಾಲ ಅವಧಿಯು ಮುಕ್ತಾಯ ಗೊಳ್ಳಲು ಬಂದಿರುವಂತಹ ಔಷಧಿಗಳನ್ನು ಕೊಟ್ಟು ಕಳುಹಿಸುವುದು ಅನಂತರ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನದಾಗಿ ಔಷಧಿಯನ್ನು ಸಿಂಪಡಣೆ ಮಾಡುವುದು ಮತ್ತು ಅದರ ಜೊತೆಯಲ್ಲಿ ಹೆಚ್ಚು ಹೆಚ್ಚು ಹಣ ಸಂಗ್ರಹಿಸುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಕೇಳಿಬರುತ್ತದೆ.

ಹೆಚ್ಚಿನದಾಗಿ ಆರೋಗ್ಯವಂತ ಮನುಷ್ಯ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಹೆಚ್ಚಿನ ಔಷಧಿಯನ್ನು ಮನುಷ್ಯನಿಗೆ ನೀಡಿದರೆ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಕಾಣಬಹುದು.
ನಕಲಿ ವೈದ್ಯರ ನಿರ್ಲಕ್ಷದಿಂದ ಗ್ರಾಮೀಣ ಭಾಗದ ಹಳ್ಳಿಯ ರೈತರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ.

Related