ಎಫ್.ಎನ್.ಎಚ್. ಡಬ್ಲ್ಯೂ ಕಾರ್ಯಾಗಾರ ಉದ್ಘಾಟನೆ

ಎಫ್.ಎನ್.ಎಚ್. ಡಬ್ಲ್ಯೂ ಕಾರ್ಯಾಗಾರ ಉದ್ಘಾಟನೆ

ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಆಯೋಜಿಸುತ್ತಿರುವ ಎರಡು ದಿನಗಳ ವಿಭಾಗಿಯ ಆಹಾರ, ಪೌಷ್ಟಿಕತೆ, ಆರೋಗ್ಯ ಮತ್ತು ನೈರ್ಮಲ್ಯ ದ ಕಾರ್ಯಕಾರವನ್ನು ಇಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಸಚಿವರಾದ ಶರಣಪ್ರಕಾಶ್ ಪಾಟೀಲ್ ಅವರು ನಗರದ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಉದ್ಘಾಟನೆ ಮಾಡಿದರು.

ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಊಟ ಮತ್ತು ಪೌಷ್ಟಿಕಾಂಶವನ್ನು ವೃದ್ಧಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಡತನ ನಾಗರಿಕರಿಗೆ ಉಚಿತ ಅಕ್ಕಿ ಮತ್ತು ಇತರ ಪೌಷ್ಟಿಕಾಂಶಗಳನ್ನು ಒದಗಿಸಲಾಗುತ್ತಿದೆ. ಪೌಷ್ಟಿಕಾಂಶಯುಕ್ತ ಆಹಾರವನ್ನು ಅಂಗನವಾಡಿ ಮೂಲಕ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಕೇವಲ ನಮ್ಮ ರಾಜ್ಯ ಮಾತ್ರವಲ್ಲದೆ ಇನ್ನೂ ಬೇರೆ ರಾಜ್ಯಗಳಿಂದ ಸುಮಾರು 19 ರಾಜ್ಯದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಜಂಟಿ ಮುಖ್ಯ ಕಾರ್ಯದರ್ಶಿ ಉಮಾದೇವನ್, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಸ್ಮೃತಿ ಶರಣ್, ಗ್ರಾಮೀಣ ಅಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಕಾರ್ಯದರ್ಶಿ ನಿವೇದಿತಾ ಪ್ರಸಾದ್, ನ್ಯಾಷನಲ್ ಲೈವಲ್ಲಿವುಡ್ ಮಿಷನ್ ನಿರ್ದೇಶಕರಾದ ಪಿ.ಐ. ಶ್ರೀವಿದ್ಯಾ, ಸಿಇಓ ಸಿಕ್ಕಿಂ, ಶುಭ ಮುಖಿ, ಮಿಜೋರಾಂ, ಲಲೇಹಂಡ್ಮಿ ಮತ್ತು ಇತರರು ಹಾಜರಿದ್ದರು.

Related