ದ್ವಿತೀಯ ಪಿಯುಸಿ ಮೌಲ್ಯಮಾಪನ

ದ್ವಿತೀಯ ಪಿಯುಸಿ ಮೌಲ್ಯಮಾಪನ

ಗದಗ : ದ್ವಿತೀಯ ಪಿಯುಸಿ ಮೌಲ್ಯಮಾಪನ ಜಿಲ್ಲಾವಾರು ಕೇಂದ್ರ ಸ್ಥಾಪನೆಗೆ ಆರಂಭಿಸಿತ್ತಿರುವುದು ಶ್ಲಾಘನೀಯ ಎಂದು ರಾಜ್ಯ ವಿಧಾನ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.

ಪದವಿ ಪರ‍್ವ ಕಾಲೇಜುಗಳ ಉಪನ್ಯಾಸಕರೊಂದಿಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರೊಂದಿಗೆ ಜಿಲ್ಲಾವಾರು ಪರೀಕ್ಷಾ ಮೌಲ್ಯಮಾಪನ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ, ದ್ವಿತೀಯ ಪಿಯುಸಿ ಮೌಲ್ಯಮಾಪನ ಕೇಂದ್ರಗಳನ್ನು ಬೆಂಗಳೂರು, ಮೈಸೂರು ಸೇರಿದಂತೆ ಕೆಲವು ವಿಷಯಗಳ ಕುರಿತು ಜಿಲ್ಲಾವಾರು ಮೌಲ್ಯಮಾಪನ ಕೆಂದ್ರಗಳಲ್ಲಿ ಮಾಡುವುದಕ್ಕೆ ಆರಂಭಿಸಿರುವುದು ಅಭಿನಂದನೆ ತಿಳಿಸಿದ್ದಾರೆ.

ಬೆಳಗಾವಿ, ಮಂಗಳೂರ ವಿಭಾಗಗಳಲ್ಲಿ ಜಿಲ್ಲಾವಾರು ಮೌಲ್ಯಮಾಪನ ಕೆಂದ್ರ ಅರಂಭಿಸಲು ಬೆಳಗಾವಿ ವಿಭಾಗದಲ್ಲಿ ಕೋವಿಡ್ 19 ಸೋಂಕಿನಿಂದ ಉದ್ಭವಿಸಿರುವ ಸಂರ‍್ಭದಲ್ಲಿ ಜಿಲ್ಲಾವಾರು ಅಥವಾ ೩ ಜಿಲ್ಲೆಗಳಿಗೆ ಒಂದರಂತೆ ದ್ವಿತೀಯ, ಪಿಯುಸಿ , ಮೌಲ್ಯಮಾಪನ ಕೇಂದ್ರಗಳನ್ನು ಸ್ಥಾಪಿಸಲು ಕೋವಿಡ್ -19 ರ ಸೋಂಕು ವಿಪರೀತವಿರುವ ಜಿಲ್ಲೆಗಳಿಂದ ಕಡಿಮೆ ಪ್ರಭಾವದ ಜಿಲ್ಲಾ ಕೇಂದ್ರಗಳಿಗೆ ಕೇಂದ್ರಗಳನ್ನು ಸ್ಥಳಾಂತರಿಸಬೇಕು. ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ಜಿಲ್ಲಾವಾರು ನಡೆಯುತ್ತಿದ್ದು, ದ್ವಿತೀಯ ಪಿ.ಯು.ಸಿ. ಪರೀಕ್ಷೆಗೂ ಅಳವಡಿಸಲು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Related