ರಾಜ್ಯದಾದ್ಯಂತ ಪರಿಸರ ರಕ್ಷಣೆ ಆಗಬೇಕು: ಸಿಎಂ

ರಾಜ್ಯದಾದ್ಯಂತ ಪರಿಸರ ರಕ್ಷಣೆ ಆಗಬೇಕು: ಸಿಎಂ

ಬೊಮ್ಮನಹಳ್ಳಿ: ಶನಿವಾರ ಬೊಮ್ಮನಹಳ್ಳಿಯ ಎಚ್.ಎಸ್.ಆರ್ ಬಡಾವಣೆಯ ಸ್ವಾಭಿಮಾನಿ ಉದ್ಯಾನವನದಲ್ಲಿ ಆಯೋಜನೆ ಮಾಡಿದ್ದ ನಮ್ಮ ಸಸಿ ನಮ್ಮ ಹೆಮ್ಮೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ಗಿಡ ನೆಟ್ಟು ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಾದ್ಯಂತ ಪರಿಸರ ರಕ್ಷಣೆ ಆಗಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಗಿಡ ನೆಡುವ ಕೆಲಸ ಮಾಡಬೇಕು, ಪ್ರತಿ ವರ್ಷ ಸರ್ಕಾರ ಅರಣ್ಯ ಇಲಾಖೆಗೆ 5 ಕೋಟಿ ಗಿಡ ನೀಡುತ್ತಿದೆ ಬೆಂಗಳೂರು ಒಂದಕ್ಕೆ ಒಂದು ಲಕ್ಷ ಗಿಡ ನೀಡಲಾಗುತ್ತಿದೆ ಆದರೆ ಅರಣ್ಯ ಇಲಾಖೆ ಗಿಡಗಳನ್ನು ರಕ್ಷಣೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಡೀ ರಾಜ್ಯದ್ಯಂತ ವನಮಹೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಪರಿಸರದ ಬಗ್ಗೆ ಜನರು ಕೂಡ ಕಾಳಜಿ ವಹಿಸಬೇಕು. ಸ್ವಾಭಿಮಾನಿ ಪಾರ್ಕ್ ಈ ಹಿಂದೆ ವಿವಾದದಲ್ಲಿ ಸಿಲುಕಿತ್ತು ಉಗ್ರಪ್ಪನವರ ಹೋರಾಟ ಹಾಗೂ ಸ್ಥಳೀಯರ ಸಹಕಾರದಿಂದ ಸಾವಿರ ಕೋಟಿ ಬೆಲೆಬಾಳುವ 12:30 ಎಕರೆ ಜಾಗ ಉಳಿದಿದೆ ಎಂದರು.

ಇತ್ತೀಚೆಗೆ ಹವಮಾನ ವೈಪರಿತ್ಯ ಹೆಚ್ಚಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಅರಣ್ಯ ನಮ್ಮಲ್ಲಿ ಕಡಿಮೆ ಇರುವುದು, ಜೂನ್ ತಿಂಗಳಲ್ಲಿ ಮಳೆ ಆಗಬೇಕಿತ್ತು ಆದರೆ ಜುಲೈ ತಿಂಗಳಲ್ಲಿ ಮಳೆ ಅಲ್ಲಲ್ಲಿ ಪ್ರಾರಂಭ ಆಗಿದೆ ಇದರಿಂದ ಕೃಷಿ ಚಟುವಟಿಕೆಗೆ ತೊಂದರೆ ಆಗಿದೆ. ಗಿಡ ಮರಗಳ ನಾಶದಿಂದಾಗಿ ಮಳೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಹಿಂದಿನ ಕಾಲದಲ್ಲಿ ಒಂದು ಮರ ಕಡಿದರೆ ಎರಡು ಗಿಡಗಳನ್ನು ನೆಡುವ ಕೆಲಸ ಮಾಡುತ್ತಿದ್ದರು, ಆದರೆ ಇತ್ತೀಚೆಗೆ ಮರಗಳನ್ನು ಕಡಿಯುತ್ತಾ ಹೋಗುತ್ತಿರುವುದು ಪರಿಸರದ ಮೇಲೆ ಭಾರಿ ಪ್ರಭಾವ ಬೀರುತ್ತಿದೆ ಎಂದರು.

ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಸ್ಥಳೀಯವಾಗಿ ಸ್ವಾಭಿಮಾನಿ ಪಾರ್ಕ್ ನಿಂದ ಸಹಕಾರ ಆಗಿದೆ, ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಬೆಂಗಳೂರು ತಾಪಮಾನ‌ ಕಡಿಮೆ ಇತ್ತು, ಇತ್ತಿಚೆಗೆ ಅದು ಹೆಚ್ಚಾಗಿದೆ,ನಾವು ಪರಿಸರ ಕಾಳಜಿವಹಿಸಬೇಕು ಎಂದರು.

ನುಡಿದಂತೆ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ, ಎರಡು ವರ್ಷ ಯಡಿಯೂರಪ್ಪ ಹಾಗೂ ಎರಡು ವರ್ಷ ಬೊಮ್ಮಾಯಿ ಆಡಳಿತ ನಡೆಸಿದ್ದರು, ಆದರೆ ಅವರು ನೀಡಿದ ಭರವಸೆ ಈಡೇರಿಸಲು ಸಾದ್ಯವಾಗಿಲ್ಲ, ಚುನಾವಣೆ ಸಂದರ್ಬದಲ್ಲಿ ನಾವು 10 ಕೆ.ಜಿ.ಅಕ್ಕಿ ನೀಡುವ ಭರವಸೆ ನೀಡಿದ್ದೇವೆ ಆದರೆ ಕೇಂದ್ರ ಸರ್ಕಾರ ಅಕ್ಕಿಯಲ್ಲೂ ರಾಜಕಾರಣ ಮಾಡಿದೆ ಎಂದರು.

ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಮಾತನಾಡಿ, ದೇಶದಲ್ಲಿ ಹಲವರು ಆಶ್ವಾಸನೆ ಕೊಟ್ಟಿದ್ದರು, ಕಪ್ಪು ಹಣ ತರುತ್ತೇವೆ ಎಂದು ಹೇಳಿದ್ದರು, ಆದರೆ ಯಾರು ನುಡಿದಂತೆ ನಡೆದಿಲ್ಲ, ಆರೋಗ್ಯ ಏರುಪೇರಾಗಿದ್ದರು, ಪರಿಸರ ಕಾಳಜಿವಹಿಸಿ ಕಾರ್ಯಕ್ರಮಕ್ಕೆ ಸಿ.ಎಂ ಆಗಮಿದ್ದಾರೆ. ಕನಿಷ್ಣ 30 ರಷ್ಟು ಅರಣ್ಯ ಪ್ರದೇಶ ಇರಬೇಕು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ, ಆದರೆ ನಮ್ಮಲ್ಲಿ ಕೇವಲ 17 ರಷ್ಟು ಮಾತ್ರ ಉಳಿದಿದೆ, ಇಂತಹ ಸಂದರ್ಭದಲ್ಲಿ ನಾವು ರಾಜ್ಯವ್ಯಾಪಿ ಲಕ್ಷಾಂತರ ಗಿಡ ನಡೆವ ಕಾರ್ಯಕ್ರಮ ನಡೆಯುತ್ತಿದೆ, ನಾವು ಶಾಲಾ ಕಾಲೇಜುಗಳಲ್ಲಿ ಗಿಡ ನೆಡೆವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ‌ ಸಚಿವ ಎಚ್.ಎಂ.ರೇವಣ್ಣ, ಉಗ್ರಪ್ಪ, ಜಯಶ್ರೀ ಗೌಡ, ರಾಮೋಜಿ ಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಾಸುದೇವ ರೆಡ್ಡಿ, ಮನ್ಸೂರ್ ಅಲಿ ಖಾನ್, ಕೆ ವಾಸುದೇವ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related