ಡಬಲ್ ಚಿನ್ ಸಮಸ್ಯೆಗೆ ಪರಿಹಾರ

ಡಬಲ್ ಚಿನ್ ಸಮಸ್ಯೆಗೆ ಪರಿಹಾರ

ಮಹಿಳೆಯರಿಗೆ ತಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುವುದು ಹೇಗೆ ಎನ್ನುವ ಆಲೋಚನೆಯು ಪ್ರತಿಕ್ಷಣವೂ ಬರುತ್ತಲೇ ಇರುತ್ತದೆ. ಹೀಗಾಗಿ ಅವರು ತಮ್ಮ ದೇಹವನ್ನು ಫಿಟ್ ಆಗಿಟ್ಟುಕೊಂಡು ಎಲ್ಲಾ ರೀತಿಯಿಂದಲೂ ಸುಂದರವಾಗಿ ಇರಬೇಕೆಂದು ಬಯಸುವರು. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಹಿಳೆಯರ ಗಲ್ಲದಲ್ಲಿ ಹೆಚ್ಚಿನ ಕೊಬ್ಬು ಬಂದಿರುವುದು. (ಎರಡು ಗಲ್ಲದ ತೊಂದರೆ) ಇದರಿಂದ ಮುಖ ಸ್ವಲ್ಪ ಮಟ್ಟಿಗೆ ಊದಿಕೊಂಡಂತೆ ಕಾಣಿಸುವುದು.

ಆದರೆ ನೀವು ಇಂತಹ ಸಮಸ್ಯೆ ನಿವಾರಣೆ ಮಾಡಬೇಕಾದರೆ ಆಗ ನೀವು ಕೆಲವೊಂದು ಸಣ್ಣ ವ್ಯಾಯಾಮಗಳನ್ನು ಮಾಡಿದರೆ ಸಾಕು. ಇದರಿಂದ ಗಲ್ಲದ ಮೇಲೆ ಇರುವಂತಹ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಂಡು ಒಳ್ಳೆಯ ಸೌಂದರ್ಯ ಪಡೆಯಬಹುದು. ನಿಮ್ಮ ಯೌವನವು ಇದರಿಂದ ಮರಳಿ ಬರುವುದು.

ಮುಖದ ಈ ವ್ಯಾಯಾಮಗಳು ರಕ್ತ ಸಂಚಾರವನ್ನು ಹೆಚ್ಚಿಸುವುದು ಮತ್ತು ನೆರಿಗೆ ನಿವಾರಣೆ ಮಾಡುವುದು. ಇದರಿಂದಾಗಿ ಮುಖದಲ್ಲಿ ನಗು ಮೂಡುವುದು. ಹೀಗಾಗಿ ನೀವು ತುಂಬಾ ಸುಂದರ ಹಾಗೂ ಹದಿಹರೆಯದವರಂತೆ ಕಾಣಬಹುದಾಗಿದೆ.

ತುಂಬಾ ಸರಳವಾದ ವ್ಯಾಯಾಮವೆಂದರೆ ಅದು ಊ ಈ ಎಂದು ಮುಖದಲ್ಲಿ ಚಲನೆ ಉಂಟು ಮಾಡುವುದು. ಊ ಈ ಎಂದು ನೀವು ಸದ್ದು ಮಾಡುತ್ತಲಿದ್ದರೆ ಆಗ ಮೇಲ್ಭಾಗದ ತುಟಿ ಮತ್ತು ಮೂಗು ಹಾಗೂ ತುಟಿಗಳ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ಸಿಗುವುದು.

ಹುಬ್ಬುಗಳನ್ನು ಮೇಲಕ್ಕೆತ್ತಿ
ಹಣೆಗೆ ಕೂಡ ಸ್ವಲ್ಪ ವ್ಯಾಯಾಮ ನೀಡುವುದು ಅತೀ ಅಗತ್ಯವಾಗಿ ಇರುವುದು. ಹೀಗಾಗಿ ನೀವು ತುಂಬಾ ಸರಳವಾಗಿ ಇರುವಂತಹ ವ್ಯಾಯಾಮ ಮಾಡಿದರೆ ತುಂಬಾ ಒಳ್ಳೆಯದು. ವಿ ಆಕಾರವನ್ನು ನಿಮ್ಮ ಬೆರಳಿನಲ್ಲಿ ಮಾಡಿಕೊಳ್ಳಿ ಮತ್ತು ಹುಬ್ಬುಗಳ ಆರಂಭವಾಗುವ ಭಾಗದಲ್ಲಿ ಈ ಬೆರಳುಗಳನ್ನು ಇಡಬೇಕು.

ಈಗ ನೀವು ಬೆರಳುಗಳಿಂದ ಚರ್ಮವನ್ನು ಮೇಲಕ್ಕೆ ಎತ್ತಬೇಕು. ಹೀಗೆ ನೀವು ಹತ್ತು ಸಲ ಮಾಡಿ. ಹತ್ತು ಚಲನೆಯಲ್ಲಿ ಮೂರು ಸೆಟ್ ಮಾಡಬಹುದು. ಇದರ ಬಳಿಕ ಮತ್ತೆ ಇದೇ ರೀತಿಯಾಗಿ ಮೂರು ಸೆಟ್ ಮಾಡಿ.

ಮುಖ ಎತ್ತುವ ವ್ಯಾಯಾಮ
ಇದು ತುಟಿಗಳ ಮೇಲ್ಭಾಗದ ಸ್ನಾಯುಗಳ ಮೇಲೆ ತುಂಬಾ ಪರಿಣಾಮ ಬೀರುವುದು ಮತ್ತು ಚರ್ಮವು ಜೋತು ಬೀಳುವುದನ್ನು ಇದು ತಡೆಯುತ್ತದೆ. ಈ ವ್ಯಾಯಾಮ ಮಾಡಿದರೆ ಅದರಿಂದ ನಿಮಗೆ ಒಳ್ಳೆಯ ನಗು ಬರುವುದು ಮತ್ತು ಇದರಿಂದ ಮೇಲಿನ ಹಲ್ಲುಗಳು ಕಾಣುವುದು.

ಈ ವ್ಯಾಯಾಮ ಮಾಡಲು ನಿಮ್ಮ ಬಾಯಿಯನ್ನು ತೆರೆಯಿರಿ ಮತ್ತು ಮೂಗಿನ ಹೊಳ್ಳೆಗಳನ್ನು ಕೂಡ ದೊಡ್ಡದು ಮಾಡಿ. ಮೇಲಿನ ತುಟಿಯನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಎತ್ತಿಕೊಳ್ಳಿ.

ಹೀಗೆ ಹತ್ತು ಸೆಕೆಂಡು ಕಾಲ ಮಾಡಿ. ಬಾಯಿ ತೆರೆಯಿರಿ ಮತ್ತು ಗಲ್ಲದ ಮೇಲೆ ಹೆಬ್ಬೆರಳನ್ನು ಇಡಿ ಮತ್ತು ಮೇಲಿನ ತುಟಿಯನ್ನು ನೀವು ಈ ಸಮಯದಲ್ಲಿ ತಿರುಗಿಸಿ. ಹತ್ತು ಸೆಕೆಂಡು ಕಾಲ ಹಾಗೆ ಮಾಡಿ. ಹತ್ತು ಸಲ ಇದನ್ನು ಮಾಡಿ.

ನಗುತ್ತಾ ವ್ಯಾಯಾಮ ಮಾಡಿ
ಇದು ಮುಖವನ್ನು ತೆಳ್ಳಗೆ ಮಾಡುವುದಲ್ಲದೆ, ನೀವು ತುಂಬಾ ಸುಂದರವಾಗಿ ಕಾಣುವಂತೆಯೂ ಮಾಡುವುದು. ನೀವು ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಸುಂದರವಾಗಿ ನಗಬಹುದು ಮಾತ್ರವಲ್ಲದೆ, ಸುಂದರವಾಗಿ ಕಾಣಲೂಬಹುದು.

ಈ ವ್ಯಾಯಾಮವು ನಿಮ್ಮ ಬಾಯಿಯನ್ನು ನಿಧಾನವಾಗಿ ಸಂಪೂರ್ಣವಾಗಿ ನಗುವಿನತ್ತ ಕೊಂಡೊಯ್ಯುತ್ತದೆ. ನಿಮ್ಮ ಮುಖದ ಮೇಲೆ ಮತ್ತು ನಗುವಿಗೆ ಇದು ಒಳ್ಳೆಯ ನಿಯಂತ್ರಣ ಒದಗಿಸಿಕೊಡುವುದು. ನೀವು ಆದಷ್ಟು ಮಟ್ಟಿಗೆ ದೀರ್ಘವಾಗಿ ನಗಿ. ಇದನ್ನು ಹತ್ತು ಸಲ ಮುಂದುವರಿಸಿ.

ಹಣೆಯನ್ನು ಕೈಗಳಿಂದ ಮೇಲಕ್ಕೆತ್ತಿ
ಹಣೆ ಮೇಲೆ ಬೀಳುವಂತಹ ನೆರಿಗೆಯನ್ನು ಇದು ಕಡಿಮೆ ಮಾಡುವುದು. ಈ ವ್ಯಾಯಾಮವನ್ನು ನೀವು ಅಭ್ಯಾಸ ಮಾಡಲು ಅಂಗೈಯ ಕೆಳಭಾಗದಿಂದ ನೀವು ಹುಬ್ಬಗಳನ್ನು ಮೇಲಕ್ಕೆ ಎತ್ತಿ. ನೀವು ತುಂಬಾ ಕುಪಿತರಾಗಿರುವಂತೆ ಅಥವಾ ಅಚ್ಚರಿಗೊಂಡಂತೆ ಕೈಗಳನ್ನು ಮೇಲೆ ಕೆಳಗೆ ಮಾಡಿ. ಹೀಗೆ ನೀವು ಹತ್ತು ಸಲ ಮಾಡಿ. ಹೀಗೆ ಸ್ವಲ್ಪ ಸಮಯ ನಿಂತ ಬಳಿಕ 30 ಸೆಕೆಂಡುಗಳ ಕಾಲ ಹುಬ್ಬುಗಳನ್ನು ಹೀಗೆ ಮಾಡಿ. ಹತ್ತು ಸಲ ನೀವು ಹೀಗೆ ಮಾಡಬೇಕು.

ಬಾಯಿಯ ವ್ಯಾಯಾಮ
ಈ ವ್ಯಾಯಾಮವು ನಿಮ್ಮ ತುಟಿಗಳು ಮತ್ತು ಗಲ್ಲಕ್ಕೆ ವ್ಯಾಯಾಮ ನೀಡುವುದು. ಈ ವ್ಯಾಯಾಮ ಮಾಡಿದರೆ ಮೀನಿನಂತ ಮುಖ ಮಾಡಿ ಎರಡು ತುಟಿಗಳನ್ನು ಸರಿಯಾಗಿ ಸೇರಿಸಿಕೊಳ್ಳಿ ಮತ್ತು ಮುಂದಕ್ಕೆ ತನ್ನಿ. ಈಗ ನೀವು ತುಟಿಗಳನ್ನು ಎಡ ಹಾಗೂ ಬಲಕ್ಕೆ ತನ್ನಿ. ಹೀಗೆ ನೀವು ಹತ್ತು ಸಲ ಮಾಡಿ.

ಎರಡು ಗಲ್ಲದ ವ್ಯಾಯಾಮ
ಈ ವ್ಯಾಯಾಮವು ಎರಡರಷ್ಟು ಇರುವ ಗಲ್ಲವನ್ನು ತೆಳ್ಳಗೆ ಮಾಡುವುದು. ಮುಖವನ್ನು ನೇರವಾಗಿ ಇಡಿ. ನೀವು ಕೆಳಭಾಗದ ದವಡೆಯನ್ನು ಮುಂದಕ್ಕೆ ಕೊಂಡುಹೋಗಿ, ಈ ವೇಳೆ ಗಲ್ಲವು ಮೇಲಕ್ಕೆ ಬರುತ್ತಿರಲಿ. ಈಗ ಮೊದಲಿನ ಸ್ಥಾನಕ್ಕೆ ಬನ್ನಿ. ಹೀಗೆ ಹತ್ತು ಸಲ ಮಾಡಿ.

Related