ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದಿಯಾ? ಹಾಗಾದ್ರೆ ಅದರ ಹಾರೈಕೆ ಹೀಗೆ ಮಾಡಿ

ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದಿಯಾ? ಹಾಗಾದ್ರೆ ಅದರ ಹಾರೈಕೆ ಹೀಗೆ ಮಾಡಿ

ಸಾಮಾನ್ಯವಾಗಿ ಮನಿ ಪ್ಲಾಂಟ್ ಗಿಡವನ್ನು ಎಲ್ಲರೂ ತಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬೆಳೆಸುವುದು ಸರ್ವೇಸಾಮಾನ್ಯ. ಈ ಮನಿ ಪ್ಲಾಂಟ್ ನಮ್ಮ ಮನೆ ಅಥವಾ ಮನೆ ಸುತ್ತಮುತ್ತಲು ಬೆಳೆಸಿದರೆ ಹಣ ಸಮೃದ್ಧಿಯಾಗುತ್ತದೆ ಮತ್ತು ಸುಖ ಸಂಪತ್ತು ಒದಗುತ್ತದೆ ಎಂದು ನಂಬಿಕೆ ಇದೆ.

ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಹಲವಾರು ರೀತಿಯ ವಾಸ್ತು ದೋಷಗಳು ನಿವಾರಣೆಯಾಗಿ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದ್ರೆ ಈ ಮನಿ ಪ್ಲಾಂಟನ್ನು ಹೇಗೆ ನಾವು ಬೆಳೆಸುವುದು, ಹೇಗೆ ಇದರ ಆರೈಕೆಯನ್ನು ಮಾಡುವುದು ನಾವಿಂದು ತಿಳಿಯೋಣ.

ಮನಿ ಪ್ಲಾಂಟನ್ನು ನಾವು ಹೇಗೆ ಬೆಳೆಸಬೇಕು ಮನೆ ಮತ್ತು ಮುಖಛೇರಿಯಲ್ಲಿ ಯಾವ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು ಎಂದು ನಮಗೆ ಮೊದಲೇ ಗೊತ್ತಿರಬೇಕು.

ಮನಿ ಪ್ಲಾಂಟ್ ಕಿಡವನ್ನು ಸಮನ್ಯವಾಗಿ ಹೆಚ್ಚು ಬೆಳಕು ಬೀಳುವ ಜಾಗದಲ್ಲಿ ಇಡಬೇಕು. ಸೂರ್ಯನ ಶಾಖ ಕಡಿಮೆ ಬೀಳುವ ಜಾಗದಲ್ಲಿ ಮನಿ ಪ್ಲಾಂಟ್ ಕಿಡವನ್ನು ಇಟ್ಟರೆ ತುಂಬಾ ಒಳ್ಳೆಯದು ಮತ್ತೆ ತುಂಬಾ ಚೆನ್ನಾಗಿ ಬೆಳೆಯುತ್ತದೆ.

ಇನ್ನು ಪ್ರತಿನಿತ್ಯ ನೀರನ್ನು ಹಾಕುವುದು ಅವಶ್ಯಕತೆ ಇರುವುದಿಲ್ಲ ಎರಡು ದಿನಕ್ಕೊಂದು ಸಾರಿ ಮನಿ ಪ್ಲಾಂಟ್ ಗೆ ನೀರು ಹಾಕಿದರೆ ಸಾಕು.

ಮನಿ ಪ್ಲಾಂಟ್ ಗಿಡದಲ್ಲಿ ಹಳದಿ ಕಟ್ಟಿದ ಎಲೆಗಳಿದ್ದರೆ ಅದನ್ನು ಕಿತ್ತುಹಾಕಿ ಬಿಸಾಕಬೇಕು. ನೀವಿನ್ನೇನಾದರೂ ಮನಿ ಪ್ಲಾಂಟ್ ಗೆ ಗೊಬ್ಬರವನ್ನು ಹಾಕಬೇಕಾದರೆ ನೈಸರ್ಗಿಕವಾಗಿ ಸಿಗುವಂತಹ ಸಗಣಿ ಗೊಬ್ಬರವನ್ನು ಹಾಕಿದರೆ ಸಾಕು ಇದು ಚೆನ್ನಾಗಿ ಬೆಳೆಯುತ್ತದೆ.

ಅಥವಾ ಮನೆಯಲ್ಲಿ ಸಿಗುವಂತ ಪದಾರ್ಥ ಟೀ ಪೌಡರ್ ಅನ್ನು ನಾವು ಹಾಕಬಹುದು ಇದರಿಂದ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುತ್ತದೆ.

ಇನ್ನು ಎಲ್ಲರ ಮನೆಯಲ್ಲಿ ಸಿಗುವಂತಹ ಹಾಲು, ಈ ಹಾಲನ್ನು ಹಸಿಯಾಗಿ ನೀರಲ್ಲಿ ಬೆರೆಸಿ ಮನಿ ಪ್ಲಾಂಟ್ ಹಾಕುವುದರಿಂದ ಮನಿ ಪ್ಲಾಂಟ್ ಸಮೃದ್ಧಿಯಾಗಿ ಬೆಳೆಯುತ್ತದೆ.

ಮನಿ ಪ್ಲಾಂಟ್ಗಾಗಿ ಕಂದು ಮಣ್ಣನ್ನು ಬಳಸಿ. ಇದು ಒಂದೇ ಸ್ಥಳದಲ್ಲಿ ನೀರು ಸಂಗ್ರಹವಾಗದ ಕಾರಣ, ಅದು ತನ್ನ ಬೇರುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ. ತೇವಾ ಮನಿ ಪ್ಲಾಂಟ್ಗೆ ಮಣ್ಣನ್ನು ಸಿದ್ಧಪಡಿಸುವಾಗ, 50 ಪ್ರತಿಶತ ಸಾಮಾನ್ಯ ಮಣ್ಣು, 20 ಪ್ರತಿಶತ ಕಾಂಪೋಸ್ಟ್, 10 ಪ್ರತಿಶತ ಮರಳು, 10 ಪ್ರತಿಶತ ಕೋಕೋಪೀಟ್, 5 ಪ್ರತಿಶತ ಪರ್ಲೈಟ್ ಮತ್ತು ವರ್ಮಿಕ್ಯುಲೈಟ್ ಅನ್ನು ಮಿಶ್ರಣ

ಪ್ರತಿ ಗಿಡಕ್ಕೂ ವಿಭಿನ್ನ ಪ್ರಮಾಣದ ನೀರು ಬೇಕಾಗುತ್ತದೆ. ಅದರಲ್ಲಿಯೂ ಮನಿ ಪ್ಲಾಂಟ್ಗೆ ಹೆಚ್ಚು ನೀರು ಹಾಕಬಾರದು. ನೀರು ಹಾಕುವಾಗ ಮಣ್ಣು ಸ್ವಲ್ಪ ಒಣಗಿದೆಯೇ ಎಂದು ಯಾವಾಗಲೂ ಪರಿಶೀಲಿಸಿ.

ಇನ್ನು ಮನೆಯಲಂಕಾರಕ್ಕೆಂದು ಮನೆ ಒಳಗಡೆ ಮನಿ ಪ್ಲಾಂಟ್ ಇದ್ದರೆ ಅದನ್ನ ನೀರಿನಲ್ಲಿ ಬೆಳೆಸುವವರು ಒಂದು ಗಾಜಿನ ಬಾಟಲು ಅಥವಾ ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಬೇರು ಇರುವ ಮನಿ ಪ್ಲಾಂಟನ್ನು ಇಟ್ಟರೆ ಸಾಕು ಅದು ಸಮೃದ್ಧಿಯಾಗಿ ಬೆಳೆಯುತ್ತದೆ. ಒಂದು ವಾರಕ್ಕೊಂದು ಸಾರಿ ತಪ್ಪದೆ ನೀರನ್ನು ಬದಲಿಸಬೇಕು.

Related