ಲಸಿಕೆಗೆ ಜನಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿಗಳು

ಲಸಿಕೆಗೆ ಜನಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿಗಳು

 ಔರಾದ: ಬೀದರ್  ಆ. 28 ರಾಜ್ಯಾದ್ಯಂತ ನಡೆದಂತೆ ಕೋವಿಡ್-19 ಲಸಿಕಕಾರಣದ ಪ್ರಗತಿಯಂತೆ ಬೀದರ್ ಜಿಲ್ಲೆಯಲ್ಲೂ ಕೂಡ ಲಸಿಕಾ ಮೇಳಕ್ಕೆ ಬೀದರ ಜಿಲ್ಲಾಡಳಿತದಿಂದ  ಚಾಲನೆ ಸಿಕ್ಕಿದೆ. ಲಸಿಕಾ ಮೇಳದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಶನಿವಾರ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸುವ ಮೂಲಕ ಲಸಿಕಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಬೀದರ್  ಗಡಿ ಜಿಲ್ಲೆಯಾಗಿದ್ದರಿಂದ ಪ್ರತಿನಿತ್ಯ ನಗರ ಪ್ರವೇಶಿಸುವ ಅಂತಾರಾಜ್ಯಗಳಾದ ಮಹಾರಾಷ್ಟ, ತೆಲಂಗಾಣ ನಗರದ ಡಾ.ಬಿ.ಆರ್.ಅಂಬೇಡ್ಕರ ಸರ್ಕಲ್ ವೃತ್ತದ ಬಳಿಯಲ್ಲಿ ಬಸ್ ತಡೆದು ಜಿಲ್ಲಾಧಿಕಾರಿಗಳು ಪ್ರಯಾಣಿಕರೊಂದಿಗೆ ಮಾತನಾಡಿ, ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಖಚಿತ ಪಡಿಸಿಕೊಂಡರು. ಪ್ರಯಾಣಿಕರಿಗೆ ಲಸಿಕಕಾರಣದ ಬಗ್ಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.
ಪ್ರತಿನಿತ್ಯ ಜನಸಂದಣಿಯಲ್ಲಿ ಸಂಚರಿಸುವ ಆಟೋ ಚಾಲಕರು, ದ್ವಿಚಕ್ರ ವಾಹನ ಸವಾರರಿಗೆ ಕೋವಿಡ್ ಲಸಿಕೆ ಪಡೆದುಕೊಳ್ಳಲು ಮನವಿ ಮಾಡಿದರು.
ಸ್ಥಳದಲ್ಲೇ ಲಸಿಕಕಾರಣ: ಲಸಿಕೆ ಹಾಕಿಸಿಕೊಳ್ಳದೇ ಇರುವವರಿಗೆ ಸ್ಥಳದಲ್ಲೇ ಲಸಿಕೆಯನ್ನು ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಎರಡನೇ ಲಸಿಕೆ ಬಾಕಿ ಇರಿಸಿಕೊಂಡಿರುವವರನ್ನು ಕೂಡ ಗುರುತಿಸಿ ಲಸಿಕೆ ನೀಡಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆಯಲ್ಲಿ ಇದುವರೆಗೆ ದಾಖಲೆಯ 9 ಲಕ್ಷ ಜನರಿಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ. 6,93,106 ಜನರು ಮೊದಲನೇ ಲಸಿಕೆಯನ್ನು ಮತ್ತು 2,06,054 ಜನರು ಎರಡನೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ನಾವು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು ಎನ್ನುವ ಮನೋಭಾವ ಈಗಾಗಲೇ ಜನರಲ್ಲಿ ಮೂಡುತ್ತಿದೆ. ಲಸಿಕೆ ಹಾಕಿಸಿಕೊಳ್ಳದೇ ಇರುವವರು ದಯಮಾಡಿ ಕೂಡಲೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಬೀದರ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ್  ಇತರರಿದ್ದರು.

Related