ದೇಗುಲ ಗೈಡ್‌ಗಳಿಗೆ ಆಹಾರ ಕಿಟ್ ವಿತರಣೆ

ದೇಗುಲ ಗೈಡ್‌ಗಳಿಗೆ ಆಹಾರ ಕಿಟ್ ವಿತರಣೆ

ಬೇಲೂರು, ಏ. 06: ಕೊರೊನಾ ರೋಗದ ಕಾರಣ ದೇಗುಲ ಬಂದ್ ಆಗಿರುವುದರಿಂದ ದೇಗುಲದ ಪ್ರವಾಸಿ ಗೈಡುಗಳು ಜೀವನ ಸಾಗಿಸುವುದು ಕಷ್ಟವಾಗಿರುವ ಹಿನ್ನಲೆಯಲ್ಲಿ ಬೇಲೂರು ಮತ್ತು ಹಳೇಬೀಡಿನ 48 ಮಾರ್ಗದರ್ಶಿಗಳಿಗೆ ಆಹಾರ ಸಾಮಾಗ್ರಿಗಳನ್ನು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ವಿತರಿಸಿದರು.

ಪಟ್ಟಣದ ಮಯೂರವೇಲಾಪುರಿ ಹೊಟೇಲ್ ಸಮುಚ್ಚಯದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಾಮಾಗ್ರಿ ವಿತರಣೆ ಮಾಡಿ ಮಾತನಾಡಿದ ಅವರು, ಇಂದು ಕೊರೊನಾ ಹಾವಳಿಯಿಂದ ದೇಶ ಸಂಕಷ್ಟದಲ್ಲಿದೆ. ಈ ಸಂದರ್ಭ ಹಲವರು ಹಸುವಿನಿಂದ ನರಳುತ್ತಿದ್ದಾರೆ. ದೇಗುಲದಲ್ಲಿ ಗೈಡ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದವರ ಆಧಾಯಕ್ಕೆ ದಕ್ಕೆಯಾಗಿದೆ ಅವರ ಕುಟುಂಬ ಉಪವಾಸ ಇರಬಾರದು ಎನ್ನುವ ಕಾರಣಕ್ಕೆ ಆಹಾರಸಾಮಾಗ್ರಿ ನೀಡಲಾಗಿದೆ. ಇದು ಅಲ್ಪ ಪ್ರಮಾಣದ ನೆರವು ಅಷ್ಟೆ ಎಂದರು.

ಗೈಡ್‌ಗಳಂತೆ ರಂಗಭೂಮಿ ಕಲಾವಿದರೂ ಸಹ ಇದ್ದಾರೆ. ಬದುಕಿಗೆ ದಿನದ ಕಾಯಕವಾಗಿ ರಂಗಭೂಮಿಯಲ್ಲೆ ಸೇವೆ ಸಲ್ಲಿಸುತ್ತಿರುವ ಹಲವು ಕಲಾವಿದರಿದ್ದಾರೆ. ಈ ತಕ್ಷಣ ಅಂತಹ ಕಲಾವಿದರು ಇದ್ದರೆ ಮಾಹಿತಿ ಪಡೆಯಲು ಸಾಧ್ಯವಿಲ್ಲದ ಕಾರಣ ಅಂತಹವರು ತಾಲ್ಲೂಕಿನಲ್ಲಿ ಇದ್ದರೆ ತಹಸೀಲ್ದಾರ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದರೆ ಅಗತ್ಯ ನೆರವು ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿದೇರ್ಶಕ ಶಿವಲಿಂಗಪ್ಪ ಎನ್.ಕುಮಾರ್, ತಹಸೀಲ್ದಾರ್ ನಟೇಶ್, ತಾ.ಪಂ.ಇಒ ರವಿಕುಮಾರ್, ವೇಲಾಪುರಿ ಹೊಟೇಲ್ ವ್ಯವಸ್ಥಾಪಕ ಪಾಪಣ್ಣ, ಸಚಿವರ ಆಪ್ತಸಹಾಯಕ ಹರೀಶ್, ಪ್ರಮುಖರಾದ  ರಾಜಣ್ಣ, ನಾಗರಾಜ್‌ಚಿಟ್ಟಿ, ತಾರಾನಾಥ್ ಇದ್ದರು.

 

Related