ಅಜರ್ ಮಿಶ್ರಾರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ

ಅಜರ್ ಮಿಶ್ರಾರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ

ಸಿರುಗುಪ್ಪ : ಒಕ್ಕೂಟ ಸರ್ಕಾರದ ಗೃಹಖಾತೆಯ ರಾಜ್ಯಸಚಿವ ಅಜರ್ ಮಿಶ್ರಾರನ್ನು ಕೂಡಲೇ ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಸಮಿತಿಯು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದರು.

ಈ ವೇಳೆ ರೈತ ಮುಖಂಡರು ಮಾತನಾಡಿ, ಉತ್ತರಪ್ರದೇಶದಲ್ಲಿ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯದ ಮೇಲೆ ಸಚಿವರ ಬೆಂಗಾವಲು ವಾಹನಗಳನ್ನು ಚಲಾಯಿಸಿ ರೈತರನ್ನು ಬರ್ಬರ ಹತ್ಯೆ ನಡೆಸಲಾಗಿದೆ.

ಘಟನೆಯಿಂದಾಗಿ ಎಲ್ಲರಲ್ಲೂ ತೀವ್ರ ಆತಂಕವಾಗಿದೆ. ಒಕ್ಕೂಟ ಸರ್ಕಾರದ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹಾಗೂ ಮಗ ಹಾಗೂ ಸಂಬಂಧಿಗಳು ಗೂಂಡಾಗಳು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೂ ಸೇರಿದಂತೆ ಒಕ್ಕೂಟ ಸರಕಾರದ ಸಚಿವರು ರೈತ ಚಳವಳಿ ನಿಲ್ಲಿಸುವ ಅಪರಾಧ ಮಾಡಿದ್ದಾರೆ. ಇಂಥದ್ದೊಂದು ಬರ್ಬರ ಮತ್ತು ಅಮಾನುಷ ಮತ್ತು ತೀವ್ರ  ಸ್ವರೂಪದ ಅಧಿಕಾರ ದುರುಪಯೋಗದ ಘಟನೆಗಳನ್ನು ಪ್ರಧಾನಮಂತ್ರಿಗಳು  ಖಂಡಿಸದೇ  ಇರುವುದು ಸಹ ಸಂಚಿನ ವಾಸನೆಯನ್ನು ಬಹಿರಂಗ ಪಡಿಸಿದೆ ಎಂದರು.,

ಈ ಸಂದರ್ಭದಲ್ಲಿ ಕರ್ನಾಟಕ  ಪ್ರಾಂತ  ರೈತ  ಸಂಘದ  ತಾಲ್ಲೂಕು  ಅಧ್ಯಕ್ಷ ವಿ ಮಾರುತಿ,  ಪ್ರಧಾನ  ಕಾರ್ಯದರ್ಶಿ  ಬುಳ್ಳಪ್ಪ ಕರ್ನಾಟಕ ರಾಜ್ಯ  ರೈತ  ಸಂಘ  ನಗರ  ಅಧ್ಯಕ್ಷರಾದ ಸಿದ್ಧರಾಮನಗೌಡ ಹಾಗೂ ರೈತ  ಮುಖಂಡರಾದ  ಹೆಚ್ .ಬಿ. ಓಬಳೇಶ್ ವರಮ್ಮ, ಮಲ್ಲಯ್ಯ,  ಬಿ ನಾಗರಾಜ, ಯಲ್ಲಪ್ಪ, ಹುಲುಗಪ್ಪ, ಬಸಪ್ಪ, ಮರೆಮ್ಮ ವೀರಭದ್ರಯ್ಯ ಸ್ವಾಮಿ ಇದ್ದರು.

Related