ಭಾರತದ ರೂಪಾಯಿ ಮೌಲ್ಯ ಕುಸಿತ

ಭಾರತದ ರೂಪಾಯಿ ಮೌಲ್ಯ ಕುಸಿತ

ದೆಹಲಿ ಜು19: ಭಾರತದ ರೂಪಾಯಿ ಮೌಲ್ಯ ಅಮೇರಿಕಾದ ಡಾಲರ್ ಎದುರು ಮತ್ತೊಮ್ಮೆ ಕುಸಿತ ಕಂಡಿದ್ದು, ಮೊದಲ ಬಾರಿಗೆ ಪ್ರತಿ ಡಾಲರ್‌ಗೆ 80ರೂ. ಗಡಿ ತಲುಪಿದೆ.

ವಿದೇಶಿ ಹೂಡಿಕೆದಾರರು ಭಾರತದ ಷೇರುಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿದ್ದರಿಂದ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 80ರೂ.ಗೆ ತಲುಪಿದೆ. ಇನ್ನು ಈ ಬೆಳವಣಿಗೆ ಮುಂದುವರಿದರೆ ಮತ್ತಷ್ಟು ಅಪಾಯದ ಹಂತ ತಲುಪುತ್ತದೆ. ಹಾಗೂ ಈ ಕುಸಿತವು ಇನ್ನಷ್ಟು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ರೂಪಾಯಿ ಮೌಲ್ಯ ಕುಸಿದಷ್ಟು ನಾವು ವಿದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಡಾಲರ್‌ನಲ್ಲಿ ಪಾವತಿ ಮಾಡಿದರೆ ಹೆಚ್ಚುವರಿ ಹಣ ಪಾವತಿಸಬೇಕಾಗಿದ್ದು, ಆಮದು ಹೊರೆಯಾಗಿ ಪರಿಣಮಿಸಲಿದೆ. ಇನ್ನು ರೂಪಾಯಿ ಮೌಲ್ಯ ಕುಸಿತದಿಂದ ರಫ್ತು ಮಾಡುವ ವಲಯಗಳಿಗೆ ಲಾಭವಾಗಲಿದೆ. ರಫ್ತು ಮಾಡುವ ವಲಯದವರಿಗೆ ಡಾಲರ್‌ಗಳಲ್ಲಿ ಪಾವತಿ ಮಾಡಲಾಗುತ್ತದೆ ಇದರಿಂದ ಲಾಭದಾಯಕವಾಗಲಿದೆ.

Related