ಚಾಮುಂಡಿಯ ದರ್ಶನ ಪಡೆದ ಡಾಲಿ

ಚಾಮುಂಡಿಯ ದರ್ಶನ ಪಡೆದ ಡಾಲಿ

ಮೈಸೂರು: ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಾಕು ಮೂಡಿಸಿರುವಂತಹ ಡಾಲಿ ಧನಂಜಯ್ ಅವರು ಇಂದು ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಪಡೆದರು.

ಹೌದು, ನಟ ಧನಂಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ಇಂದು ಆಷಾಢ 2ನೇ ಶುಕ್ರವಾರ. ಹೀಗಾಗಿ ಧನಂಜಯ್ ಅವರು ಮೈಸೂರಿನ ಚಾಂಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್​’ ಮೂಲಕ ‘ಡೇರ್​ ಡೆವಿಲ್​’ಸಿನಿಮಾನ ಪ್ರೆಸೆಂಟ್ ಮಾಡಿದ್ದರು.

Related